Oyorooms IN

Monday, 24th July, 2017 10:00 PM

BREAKING NEWS

ಚಿಕ್ಕಬಳ್ಳಾಪುರ

ಬಯಲು ಶೌಚಾಲಯ ಮುಕ್ತ ಮಾಡಲು ಶ್ರಮಿಸಿ: ಕೆ.ಲಕ್ಷ್ಮೀನಾರಾಯಣರೆಡ್ಡಿ

ಶಿಡ್ಲಘಟ್ಟ: ಸ್ವಚ್ಛಭಾರತ ಅಭಿಯಾನ ಯೋಜನೆಯಡಿ ಮಾರ್ಚ್ ಅಂತ್ಯದೊಳಗೆ  15550 ಶೌಚಾಲಯಗಳನ್ನು ನಿರ್ಮಿಸುವ ಮೂಲಕ ತಾಲೂಕನ್ನು ಬಯಲು ಶೌಚಾಲಯ ಮುಕ್ತ ಮಾಡಲು ಶ್ರಮಿಸಬೇಕೆಂದು ತಾಲೂಕು ಪಂಚಾಯಿತಿಯ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ ಸೂಚಿಸಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಾಮಾನ್ಯ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ತಾಲೂಕಿನ ವಿವಿದ ಗ್ರಾಮ ಪಂಚಾಯಿತಿಗಳಲ್ಲಿ 15 ಸಾವಿರ ಕುಟುಂಬಗಳು ಶೌಚಾಲಯ ಹೊಂದಿಲ್ಲ ಅವರ ಮನವೊಲಿಸಿ ಮಾರ್ಚ್ 31ರೊಳಗೆ ಗುರು ಸಾಧಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿ ಈ ನಿಟ್ಟಿನಲ್ಲಿ ಚುನಾಯಿತ ಪ್ರತಿನಿಧಿಗಳು,ಸ್ವಸಹಾಯ ಸಂಘಗಳ ಸದಸ್ಯರು,ಅಂಗನವಾಡಿ ಕಾರ್ಯಕರ್ತರು,ಶಿಕ್ಷಕರು ಸಹಕಾರ ನೀಡಬೇಕೆಂದರು.
ತಾಲೂಕು ಪಂಚಾಯಿತಿಯ ಸದಸ್ಯ ನಾಗರಾಜ್ ಮಾತನಾಡಿ ಶೌಚಾಲಯಗಳ ನಿರ್ಮಿಸಿಕೊಳ್ಳದೆ ಇರುವ ಫಲಾನುಭವಿಗಳಿಗೆ ಸಹಾಯಧನವನ್ನು ಬಿಡುಗಡೆ ಮಾಡುವ ಮೂಲಕ ಭಾರಿ ಅವ್ಯವಹಾರ ನಡೆಸಲಾಗಿದೆ ಈ ಕುರಿತು ತನಿಖೆ ನಡೆಸಬೇಕೆಂದು ಆಗ್ರಹಿಸಿದರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ತಾಪಂ ಅಧ್ಯಕ್ಷರು ತಾವು ನಿಖರವಾಗಿ ದೂರು ಸಲ್ಲಿಸಿ ಸೂಕ್ತ ಕ್ರಮ ಜರುಗಿಸಲಾಗುವುದೆಂದು ಭರವಸೆ ನೀಡಿದು.
ಬರಗಾಲದ ಹಿನ್ನಲೆಯಲ್ಲಿ ಪ್ರತಿ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲೂ ಮೇವಿನ ಬ್ಯಾಂಕ್ ಅರಂಭಿಸಲು ಕ್ರಮ ಕೈಗೊಳ್ಳಳಾಗಿದೆ ಎಲ್ಲ ಬ್ಯಾಂಕ್‍ಗಳಲ್ಲಿ 2 ಟನ್‍ನಷ್ಟು ಮೇವನ್ನು ಸಂಗ್ರಹಿಸಲಾಗಿದೆ ರೈತರಿಗೆ ಪ್ರತಿ ಕೆಜಿ ಮೇವಿಗೆ ಸರಕಾರ 3  ರೂಪಾಯಿ ನೀಡಲಿದ್ದು ರೈತರಿಗೆ 3 ರೂ ಬೆಲೆ ನಿಗಧಿಪಡಿಸಲಾಗಿದೆ ಎಂದರು.
ಬಸವ ವಸತಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ವಸತಿ ನಿಗಮದ ಮೂಲಕ ಮನೆ ಮಂಜೂರಾಗಿದ್ದರು ಸಹ ಫಲಾನುಭವಿಗಳು ಮನೆ ಮಂಜೂರಾತಿಗೆ ತೋರಿಸಿದ ಉತ್ಸಾಹ ಮನೆ ನಿರ್ಮಿಸಿಕೊಳ್ಳಲು ತೋರಿಸಿಲ್ಲವೆಂದು ತಾಪಂ ಇಓ ವೆಂಕಟೇಶ್ ಕಳವಳ ವ್ಯಕ್ತಪಡಿಸಿ ಪ್ರಸ್ತುತ ಮನೆಗಳ ನಿರ್ಮಾಣಕ್ಕಾಗಿ ಪ್ರೋತ್ಸಾಹಧನವನ್ನು ಹೆಚ್ಚಳಗೊಂಡಿದ್ದರಿಂದ ಈ ಹಿಂದೆ ಮನೆ ಮಂಜೂರು ಮಾಡಿಸಿಕೊಂಡಿರುವ ಫಲಾನುಭವಿಗಳು ಹಿಂದೇಟು ಹಾಕುತ್ತಿದ್ದು ಇದರಿಂದ ಪ್ರಗತಿ ತೃಪ್ತಿದಾಯಕವಾಗಿಲ್ಲ ಮಂಜೂರಾಗಿರುವ ಮನೆಗಳನ್ನು ನಿರ್ಮಿಸಲು ಎಲ್ಲರು ಸಹಕಾರ ನೀಡಬೇಕೆಂದರು.
ಶಿಷ್ಠಾಚಾರ ಪಾಲಿಸಿ: ಸರಕಾರದಿಂದ ಬಿಡುಗಡೆಯಾಗುವ ಅನುದಾನದಲ್ಲಿ ಕೈಗೊಳ್ಳುವ ಅಭಿವೃಧ್ದಿ ಕಾಮಗಾರಿಗಳನ್ನು ನಡೆಸಿ  ಕಾರ್ಯಕ್ರಮಗಳನ್ನು ಉದ್ಘಾಟಿಸಲು ಅಧಿಕಾರಿಗಳು ಕಡ್ಡಾಯವಾಗಿ ಶಿಷ್ಠಾಚಾರವನ್ನು ಪಾಲಿಸಬೇಕು,ನಾಮಫಲಕಗಳಲ್ಲಿ ಜನಪ್ರತಿನಿಧಿಗಳು ಹೊರತುಪಡಿಸಿ ಬೇರೆ ಖಾಸಗಿ ವ್ಯಕ್ತಿಗಳ ಹೆಸರುಗಳನ್ನು ನಮೂದಿಸಬಾರದೆಂದು ಇಓ ಮನವಿ ಮಾಡಿದರು.
ತಾಲೂಕು ಪಂಚಾಯಿತಿ ಸದಸ್ಯ ನರಸಿಂಹಪ್ಪ ಮಾತನಾಡಿ ಅಧಿಕಾರಿಗಳು ಸರಕಾರಿ ಸೌಲಭ್ಯಗಳ ಕುರಿತು ಜನಪ್ರತಿನಿಧಿಗಳಿಗೆ ಮಾಹಿತಿ ನೀಡುತ್ತಿಲ್ಲವೆಂದು ಆಕ್ಷೇಪ ವ್ಯಕ್ತಪಡಿಸಿ ತಮ್ಮ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಅಧಿಕವಾಗಿದ್ದರು ತಾರತಮ್ಯ ನೀತಿಯನ್ನು ಯಾಕೆ ಅನುಸರಿಸುತ್ತೀರಿ? ಎಂದು ಕುಡಿಯುವ ನೀರು ಪೂರೈಕೆ ಮತ್ತು ಗ್ರಾಮ ನೈರ್ಮಲ್ಯ ಇಲಾಖೆ ಅಧಿಕಾರಿ ಕೇಶವಮೂರ್ತಿ ಅವರನ್ನು ತರಾಟೆಗೆ ತೆಗೆದುಕೊಂಡರು ಕುಡಿಯುವ ನೀರು ವಿಚಾರದಲ್ಲಿ ಯಾವುದೇ ತಾರತಮ್ಯ ಮಾಡುತ್ತಿಲ್ಲ ಕೊಳವೆಬಾವಿ ಮಂಜೂರಾಗಿದೆ ಶೀಘ್ರದಲ್ಲಿ ಕೊಳವೆಬಾವಿಯನ್ನು ಕೊರೆಸಲು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿ ಭರವಸೆ ನೀಡಿದರು.
ಆಹಾರ ಇಲಾಖೆಯ ನಿರೀಕ್ಷಕ ಪ್ರಕಾಶ್,ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಆನಂದ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ದೇವೇಗೌಡ, ಸಿಡಿಪಿಓ ಲಕ್ಷ್ಮೀದೇವಮ್ಮ,ಅಂಗವಿಕಲ ಕಲ್ಯಾಣ ಅಧಿಕಾರಿ ರಾಮಚಂದ್ರ,ಪಶು ಇಲಾಖೆಯ ಸಹಯಕ ನಿರ್ದೇಶಕ ಮುನಿನಾರಾಯಣರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥ್‍ರೆಡ್ಡಿ ಸೇರಿದಂತೆ ಎಲ್ಲ ಇಲಾಖೆಗಳ ಪ್ರಗತಿಯನ್ನು ಪರಿಶೀಲಿಸಲಾಯಿತು.
ತಾಲೂಕು  ಪಂಚಾಯಿತಿ ಉಪಾಧ್ಯಕ್ಷ ನರಸಿಂಹಯ್ಯ,ನಗರಸಭೆಯ ಅಧ್ಯಕ್ಷ ಅಫ್ಸರ್‍ಪಾಷ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು  ಉಪಸ್ಥಿತರಿದ್ದರು.

ಚಿಕ್ಕಬಳ್ಳಾಪುರ ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...