Oyorooms IN

Sunday, 26th March, 2017 10:31 PM

BREAKING NEWS

ದಾವಣಗೆರೆ

ಹಣಕ್ಕಾಗಿ ಶಿಕ್ಷಕರ ಜಗಳ, ಮುಖ್ಯ ಶಿಕ್ಷಕನ ಕೊಲೆ

tech_kon

ದಾವಣಗೆರೆ: ಸಹ ಶಿಕ್ಷಕರ ಎಲ್ಐಸಿ ಆರ್ ಡಿ ಹಣವನ್ನು ಪಡೆದುಕೊಂಡು ವಾಪಾಸ್ ನೀಡಲು ಸತಾಯಿಸುತ್ತಿದ್ದ ಮುಖ್ಯ ಶಿಕ್ಷಕನನ್ನು ಸಹ ಶಿಕ್ಷಕರೇ ಕೊಲೆ ಮಾಡಿರುವ ಘಟನೆ ದಾವಣಗೆರೆಯಲ್ಲಿ ಬೆಳಕಿಗೆ ಬಂದಿದ್ದು, ಕೊಲೆ ಮಾಡಿದ ಸಹ ಶಿಕ್ಷಕರನ್ನು ಪೊಲೀಸರು ಬಂಧಿಸಿದ್ದಾರೆ.

ಶಿಕಾರಿಪುರದ ವನಿತಾ ವಿದ್ಯಾಲಯದಲ್ಲಿ ಮುಖ್ಯ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಬಸವರಾಜಪ್ಪ  ಅವರ ಅಕೌಂಟಿಗೆ ಅದೇ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಚನ್ನಬಸಪ್ಪ, ಚನ್ನಪ್ಪ, ನಾಗರಾಜಪ್ಪ ಸುಮಾರು 6 ಲಕ್ಷ ಹಣವನ್ನು ಹಾಕಿದ್ದು, ಎಲ್ ಐಸಿ ಆರ್ ಡಿ ಹಣವನ್ನು ಕಟ್ಟಬೇಕಿತ್ತು. ಆದರೆ ಆ ಹಣವನ್ನು ಕಟ್ಟದೇ ಬಸವರಾಜಪ್ಪ, ಸ್ವಂತಕ್ಕೆ ಬಳಸಿಕೊಂಡಿದ್ದರು ಎನ್ನಲಾಗಿದೆ.

ಹಣವನ್ನು ನೀಡುವಂತೆ ಸಹ ಶಿಕ್ಷಕರು ಒತ್ತಾಯಿಸಿದ್ದರಿಂದ ಶಿಕಾರಿಪುರ ಬ್ಯಾಂಕ್ ನಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಿದ್ದು, ಸಾಲ ಮಂಜೂರಾದ ನಂತರ ಹಣ ಹಿಂತಿರುಗಿಸುವುದಾಗಿ ಹೇಳಿ ಬೈಕ್ ನಲ್ಲಿ ನಾಲ್ವರು ಶಿಕಾರಿಪುರಕ್ಕೆ ಹೋಗುತ್ತಿದ್ದಾಗ, ಬಸವರಾಜಪ್ಪ ಸುಳ್ಳು ಹೇಳುತ್ತಿದ್ದಾನೆ ಎಂದು ಭಾವಿಸಿ ಸಹಶಿಕ್ಷಕರೇ ಹಲ್ಲೆ ನಡೆಸಿ ಮರಕ್ಕೆ ನೇಣು ಹಾಕಿ ಪರಾರಿಯಾಗಿದ್ದರು.

English summary:  teachers kill head master for money matter in davanagere

ದಾವಣಗೆರೆ ಇನ್ನಷ್ಟು

ಪ್ರಮುಖ ಸುದ್ದಿಗಳು

ಭೀಕರ ಅಪಘಾತ ನಾಲ್ವರ ಸಾವು

ಮೈಸೂರು:ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ...


ಬಿಎಸ್ ವೈ ವಿರುದ್ಧ ದೂರು ಕೊಟ್ಟ ಕಾಂಗ್ರೆಸ್

ಬೆಂಗಳೂರು: ವಿಧಾನಸಭಾ ಉಪಚುನಾವಣಾ ಕಣ...


ಅತ್ಯಾಚಾರ ಪ್ರಕರಣದಲ್ಲಿ ಅಜ್ಜಿ ಅರೆಸ್ಟ್

ಕೊಲ್ಲಂ: ಮೊಮ್ಮಗಳ ಮೇಲೆ ಅತ್ಯಾಚಾರವೆಸಗಲು...