Oyorooms IN

Wednesday, 29th March, 2017 8:50 PM

BREAKING NEWS

ಪ್ರಮುಖ ಸುದ್ದಿಗಳು

ವಿವೇಕಾನಂದರ ಬಗ್ಗೆ ಯಾರಿಗೂ ಗೊತ್ತಿಲ್ಲದ ಸತ್ಯ..!!

ನವದೆಹಲಿ: ಸ್ವಾಮಿ ವಿವೇಕಾನಂದ ಹೆಸರು ಹೇಳಿದ ತಕ್ಷಣ 124 ವರ್ಷಗಳ ಹಿಂದೆ ಅಮೆರಿಕಾದ ಚಿಕಾಗೋದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಅವಿಸ್ಮರಣೀಯ ಭಾಷಣದ ನೆನಪು ಬರುತ್ತದೆ, ಮುಂಚೆಯೇ ಸಿದ್ಧರಾಗಿ ಒಪ್ಪಿಸಿದ ಪಾಠದಂತೆ ಅಲ್ಲದೆ,,, ಅಮೆರಿಕಾದ ಪ್ರಿಯ ಸಹೋದರ, ಸಹೋದರಿಯರೇ ಎಂದು ಅವರು ಭಾಷಣ ಪ್ರಾರಂಭಿಸಿದ ತಕ್ಷಣ ಮೂರು ನಿಮಿಷ ಸಭೆಯಲ್ಲಿ ಚಪ್ಪಾಳೆ ಸುರಿಮಳೆಯಾಗಿತ್ತು ಎನ್ನುವುದು ಸ್ಮರಣೀಯ.

ಆಂಗ್ಲಭಾಷೆಯಲ್ಲಿ ಸ್ವಾಮಿ ವಿವೇಕಾನಂದ ಮಾಡಿದ ಭಾಷಣಕ್ಕೆ ಅಮೆರಿಕನ್ನರು ಮಾರು ಹೋಗಿದ್ದರು, ಆದರೆ ಬ್ರಿಟನ್ ಇಂಗ್ಲಿಷ್ ಮೇಲೆ ಹಿಡಿತ ಹೊಂದಿದ್ದ ಸ್ವಾಮಿ ವಿವೇಕಾನಂದರು, ಶಾಲಾ ಕಾಲೇಜಿನ ದಿನಗಳಲ್ಲಿ ಮಾತ್ರ ಮೂರು ವಿಶ್ವವಿದ್ಯಾಲಯಗಳಲ್ಲಿ ಇಂಗ್ಲಿಷ್ ವಿಷಯದಲ್ಲಿ ಅವರೇಜ್ ಮಾರ್ಕ್ಸ್ ಪಡೆದಿದ್ದರು.

19ನೇ ಶತಮಾನದ ಭಾರತೀಯ ಯೋಗಪುರುಷ ಸ್ವಾಮಿ ವಿವೇಕಾನಂದ ಬಗ್ಗೆ ಬರೆದಿರುವ ಹೊಸ ಪುಸ್ತಕದಲ್ಲಿ ಈ ವಿಷಯಗಳ ಬಗ್ಗೆ ಪ್ರಸ್ತಾಪಿಸಲಾಗಿದೆ. ‘ದಿ ಮಾಡ್ರನ್ ಮಂಕ್: ವಾಟ್ ವಿವೇಕಾನಂದ ಮಿನ್ಸ್ ಟು ಅಜ್ ಟುಡೇ’ ಎನ್ನುವ ಹೆಸರಿನಲ್ಲಿ ಹಿಂಡೋಲ್ ಸೇನ್ ಗುಪ್ತಾ ಬರೆದಿರುವ ಈ ಪುಸ್ತಕವನ್ನು ಪೆಂಗ್ವಿನ್ ಸಂಸ್ಥೆ ಪ್ರಕಟಿಸಿದೆ.

ಇಂದಿನ ಭಾರತ ಸಹ ವಿವೇಕಾನಂದರ ಮಾರ್ಗವನ್ನು ಅನುಸರಿಸಬೇಕು ಎಂದು ರಚನಾಕಾರ ಸೇನ್ ಗುಪ್ತಾ ಬರೆದಿದ್ದಾರೆ, ಶ್ರೀಮಂತ ವಕೀಲರ ಕುಟುಂಬದಲ್ಲಿ ಹುಟ್ಟಿದ ವಿವೇಕಾನಂದ ಕಲ್ಕತ್ತಾದಲ್ಲಿನ ಮೆಟ್ರೋಪಾಲಿಟನ್ ಇನ್ ಸ್ಟಿಟ್ಯೂಟ್ ಸ್ಕೂಲ್ ನಲ್ಲಿ ವ್ಯಾಸಂಗ ಮಾಡಿದ್ದರಿಂದ ವಿವೇಕಾನಂದರಿಗೆ ಬ್ರಿಟಿಷ್ ಫ್ಲ್ಯೂಯೆನ್ಸಿ, ಬರವಣಿಗೆ ಅವರಿಗೆ ಕರಗತವಾಗಿತ್ತು ಎಂದು ತಿಳಿಸಿದ್ದಾರೆ.

ಆದರೆ ವಿವೇಕಾನಂದರಿಗೆ ಅವರ ಪ್ರತಿಭೆಗೆ ತಕ್ಕ ಮಾರ್ಕ್ಸ್ ಬರದೇ ಇರುವುದು ಇದಕ್ಕೆ ನಿದರ್ಶನ ಎಂದಿದ್ದಾರೆ, ಅದಕ್ಕಾಗಿ ಅವರು ಮೂರು ಯೂನಿರ್ವಸಿಟಿ ಎಕ್ಸಾಂ ಮಾರ್ಕ್ಸ್ ಗಳನ್ನು ಉಲ್ಲೇಖಿಸಿದ್ದಾರೆ, ಸೆಂಟ್ರಲ್ ಲೆವೆಲ್ ಇಂಗ್ಲಿಷ್ ನಲ್ಲಿ ವಿವೇಕಾನಂದ 47, ಎಫ್ ಎ ( ಫಸ್ಟ್ ಆರ್ಟ್ಸ್ ಸ್ಟಾಂಡರ್ಡ್ ,, ಆ ಮೇಲೆ ಇಂಟರ್ಮಿಡಿಯಟ್ ಆರ್ಟ್ ಇಲ್ಲ ಐಎ) 46, ಬ್ಯಾಚಿಲರ್ ಆಫ್ ಆರ್ಟ್ಸ್( ಬಿಎ) 56 ಮಾರ್ಕ್ಸ್ ಬಂದಿವೆ, ಹಾಗೆ ಲೆಕ್ಕ, ಸಂಸ್ಕೃತ ವಿಷಯದಲ್ಲಿಯೂ ಸಹ ಅವರೇಜ್ ಮಾರ್ಕಸ್ ಬಂದಿವೆ ಎಂದು ಹೇಳಿದ್ದಾರೆ.

English summary: The Untold Story about vivekananda

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು

ಚಪ್ಪಲಿ ಏಟು: ದೆಹಲಿಗೆ ಕಾರಿನಲ್ಲಿ ಹೊರಟ ಗಾಯಕ್ವಾಡ್

ಉಸ್ಮಾನಬಾದ್: ಏರ್ ಇಂಡಿಯಾ ಅಧಿಕಾರಿಯನ್ನು...


ತಮ್ಮನಿಗಾಗಿ ಯಾರು ಮಾಡದ ತ್ಯಾಗ ಮಾಡಿದ ಅಕ್ಕ..!

ಆಸ್ಟ್ರೇಲಿಯಾ:ಅಕ್ಕ-ತಮ್ಮನ ಸಂಬಂಧಕ್ಕಿಂತ ಪವಿತ್ರವಾದ ಸಂಬಂಧ...


ಇನ್ನೊಂದು ಈಶಾನ್ಯ ರಾಜ್ಯದ ಮೇಲೆ ಬಿಜೆಪಿ ಕಣ್ಣು !

ನವದೆಹಲಿ: ಈಗಾಗಲೇ ಈಶಾನ್ಯ ರಾಜ್ಯಗಳಾದ...