Oyorooms IN

Thursday, 27th July, 2017 4:09 AM

BREAKING NEWS

ಪ್ರಮುಖ ಸುದ್ದಿಗಳು

Top 7: ಮದುವೆಗೆ ಮುಂಚೆ ಗರ್ಭಿಣಿಯರಾದ ನಟಿಯರು

ಮದುವೆಯಾದ್ಮೇಲೆ ಮಕ್ಕಳಾಗುವುದು ಎನ್ನುವುದೆಲ್ಲಾ ಹಳೆ ಕಾಲದ ವಿಚಾರಗಳು ಈಗ ಏನಿದ್ದರು ಮದುವೆಗೆ ಮುಂಚೆ ಡೇಟಿಂಗ್, ಲಿವಿಂಗ್ ರಿಲೇಶನ್ ಎಲ್ಲಾ ಇರುವುದರಿಂದ ಮದುವೆಯ ಬಂಧಕ್ಕೆ ಒಳಗಾಗದೇ ಮಕ್ಕಳನ್ನು ಪಡೆಯುವವರ ಸಂಖ್ಯೆ ಹೆಚ್ಚಾಗಿದೆ, ಅದರಲ್ಲಿಯೂ ಬಾಲಿವುಡ್ ನಟಿಯರಲ್ಲಿ ಈ ವಿಚಾರದಲ್ಲಿ ಒಂದು ಹೆಜ್ಜೆ ಮುಂದೆ ಇದ್ದಾರೆ.

  1. ಶ್ರೀದೇವಿ

ಅಂದಕಾಲತ್ತಿಲ್ ಬಾಲಿವುಡ್ ಸುಂದರಿ ಶ್ರೀದೇವಿ, ಕನಸಿನ ರಾಣಿಯಾಗಿದ್ದ ಶ್ರೀದೇವಿ, ನಿರ್ಮಾಪಕ ಬೋನಿ ಕಪೂರ್ ಅವರನ್ನು ಎರಡನೇ ವಿವಾಹವಾಗುವ ಮುಂಚೆಯೇ ಗರ್ಭೀಣಿಯಾಗಿದೆ ಎಂದು ಶ್ರೀದೇವಿ ಅವರೇ ಒಪ್ಪಿಕೊಂಡಿದ್ದಾರೆ, ಸದ್ಯ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

  1. ಕೊಂಕಣಾಸೇನ್ ಶರ್ಮಾ.

ಬಾಲಿವುಡ್ ನ ಸಹಜ ಸುಂದರಿ ಕೊಂಕಣಾಸೇನ್ ಶರ್ಮಾ ತಮ್ಮ ನೈಜ ನಟನೆಯಿಂದ ಗುರುತಿಸಿಕೊಂಡವರು, ಬಂಗಾಳ ಮೂಲದ ಈ ನಟಿ ಮದುವೆಗೆ ಮುಂಚೆ ನಟ ರಣವೀರ್ ಶೌರಿ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದರು, ಗರ್ಭಿಣಿಯಾದ್ಮೇಲೆ ಕೆಲ ಆಪ್ತರ ಸಮ್ಮುಖದಲ್ಲಿ ಇಬ್ಬರು ಮದುವೆಯಾದರು ಎಂದು ಹೇಳಲಾಗುತ್ತಿದೆ.

  1. ಸಾರಿಕಾ

ನಟಿ ಸಾರಿಕಾ ಹಾಗೂ ಕಮಲಹಾಸನ್ ನಡುವಿನ ಪ್ರೇಮ ಗುರುತಾಗಿ ಮದುವೆಗೆ ಮುಂಚೆಯೇ ಹೆಣ್ಣು ಮಗುವಿಗೆ ಜನ್ಮವನ್ನು ನೀಡಿದ್ದರು ಸಾರಿಕಾ, ಆಕೆಯೇ ನಟಿ ಶೃತಿ ಹಾಸನ್, ಮದುವೆಯಾದ ನಂತರ ಜನಿಸಿದ್ದು ಅಕ್ಷರಾ ಹಾಸನ್ .

  1. ಸೆಲಿನಾ ಜೇಟ್ಲಿ

ಬಾಲಿವುಡ್ ನ ಹಾಟ್ ನಟಿಮಣಿಗಳಲ್ಲಿ ಒಬ್ಬರಾಗಿರುವ ಸೆಲೀನಾ ಜೇಟ್ಲಿ ದುಬೈನಲ್ಲಿ ನೆಲೆಸಿರುವ ಆಸ್ಟ್ರೇಲಿಯಾದ ಬಾಯ್ ಫ್ರೆಂಡ್ ಪೀಟರ್ ಹಗ್ ಅವರನ್ನು ಮದುವೆಯಾಗುವ ಮುಂಚೆಯೇ ಗರ್ಭಿಣಿಯಾಗಿದ್ದರು ಎನ್ನಲಾಗಿತ್ತು, ಆದರೆ ಸೇಲಿನಾ ಅದನ್ನು ನಿರಾಕರಿಸಿದ್ದಾರೆ.

  1. ಮಹಿಮಾ ಚೌಧರಿ

ನಟ ಶಾರೂಕ್ ಖಾನ್ ಜೊತೆ ಸ್ವದೇಶಿ ಜೊತೆ ನಟಿಸಿದ್ದ ಮಹಿಮಾ ಚೌಧರಿ, ಗರ್ಭೀಣಿಯಾಗಿದ್ದಾಗಲೇ ಬಾಬಿ ಮುಖರ್ಜಿ ಅವರನ್ನು ಮದುವೆಯಾದವರು.

  1. ಅಮ್ರೀತಾ ಅರೋರಾ

ಗರ್ಲ್ ಫ್ರೆಂಡ್ ನಂತಹ ಲೆಸ್ಬಿಯನ್ ಚಿತ್ರದಲ್ಲಿ ನಟಿಸುವ ಮೂಲಕ ಪಡ್ಡೆಗಳ ನಿದ್ದೆ ಕೆಡಿಸಿದ್ದ ಅಮ್ರೀತಾ ಅರೋರಾ, ತನ್ನ ಬಾಯ್ ಫ್ರೆಂಡ್ ಶಕೀಲ್ ಲಡಕ್ ಅವರನ್ನು ಗರ್ಭಿಣಿಯಾದ ತಕ್ಷಣ ಮದುವೆಯಾದವರು.

  1. ನೀನಾ ಗುಪ್ತಾ

ವೆಸ್ಟ್ ಇಂಡೀಸ್ ಕ್ರಿಕೆಟರ್ ವಿವಿಯನ್ ರಿಚರ್ಡ್ಸ್ ಜೊತೆ ಅಪೇರ್ ಹೊಂದಿದ್ದ ನೀನಾ ಅವರನ್ನು ಮದುವೆಯಾಗಲು ರಿಚರ್ಡ್ಸ್ ನಿರಾಕರಿಸಿ ಮೊದಲ ಹೆಂಡತಿ ಜೊತೆಗೆ ಇದ್ದರು, ಆದರೆ ಅಷ್ಟರಲ್ಲಿ ನೀನಾ ಗರ್ಭೀಣಿಯಾಗಿದ್ದು, ಹೆಣ್ಣು ಮಗುವಿಗೆ ಜನ್ಮನೀಡಿದ್ದರು.

ಬಾಲಿವುಡ್ ನಲ್ಲಿ ಹಲವು ನಟಿಯರು ಮದುವೆಗೆ ಮುಂಚೆಯೇ ಗರ್ಭೀಣಿಯರಾದ ನಂತರ ಮದುವೆಯಾಗಿದ್ದಾರೆ, ಅವರಲ್ಲಿ ಕೆಲವರು ಧೈರ್ಯವಾಗಿ ಹೇಳಿಕೊಂಡರೆ, ಕೆಲವರು ಕುಟುಂಬದ ಮರ್ಯಾದೆ ಹಾಗೂ ತಮ್ಮ ಫೇಮ್ ನಿಂದಾಗಿ ಇಂತಹವನ್ನು ಹೇಳಿಕೊಳ್ಳುವುದಿಲ್ಲ. ಕೆಲವರ ಇಂತಹವರ ವಿಚಾರಗಳಷ್ಟೇ ಗೊತ್ತಾಗುತ್ತದೆ.

English summary: Top 7 bollywood divas who were pregnant before they were married

ಪ್ರಮುಖ ಸುದ್ದಿಗಳು ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...