Oyorooms IN

Wednesday, 24th May, 2017 7:55 AM

BREAKING NEWS

ಅಂಕಣಗಳು

ಕುಮಾರಿ ಜಯಲಲಿತಾ ತಮಿಳರಿಗೇ “ಅಮ್ಮ” ನಮ್ಮ ಕರ್ನಾಟಕಕ್ಕೆ ‘ಅಮ್ಮ ಕಾಯಿಲೆ’!!

jayalalithaಇದುವರೆಗೆ ನಾವು ನ್ಯಾಯದೇವತೆ ಕಣ್ಣಿಗೆ ಅದೇಕೆ ಕಪ್ಪುಪಟ್ಟಿ ಕಟ್ಟಿಕೊಟ್ಟಿದ್ದಾಳೆಂದು ಆಲೋಚಿಸುತ್ತಿದ್ದೆವು. ಈಗ ನಮಗೆ ಅವಳು ತನ್ನ ಕಣ್ಣಿಗೆ ಕಪ್ಪುಪಟ್ಟಿ ಕಟ್ಟಿಕೊಂಡಿರುವ ಹಿಂದಿರುವ ಕಾರಣ ಗೊತ್ತಾಗಿದೆ.

ನ್ಯಾಯದೇವತೆಯ ಪ್ರತಿರೂಪವಾದ ‘ನ್ಯಾಯಾಂಗ’ ಅದೇಕೆ ಕಾವೇರಿಯಲ್ಲಿ ನೀರಿಲ್ಲದಿದ್ದರೂ ತಮಿಳುನಾಡಿಗೆ
“ಅಷ್ಟು ನೀರು ಬಿಡಿ, ಇಷ್ಟು ನೀರು ಬಿಡಿ” ಎಂದು ಆದೇಶ ನೀಡುತ್ತಿದೆಯೋ ನಮಗೆ ಗೊತ್ತಾಗುತ್ತಿಲ್ಲ. ನಮ್ಮ ಕನ್ನಂಬಾಡಿಯಲ್ಲಿ ನೀರಿಲ್ಲದಿರುವುದು ಅದಕ್ಕೆ ಕಾಣುತ್ತಿಲ್ಲವೇ? ಅದು ಹೇಗೆ ಕಂಡೀತು ಬಿಡಿ? ಅದು ಕಣ್ಣಿಗೆ ಕಪ್ಪುಪಟ್ಟಿ ಕಟ್ಟಿಕೊಂಡಿದೆಯಲ್ಲವೇ? ಕನಿಷ್ಠ ಓದು-ಬರಹ ಬಾರದ ಒಬ್ಬ ಸಾಮಾನ್ಯ ಮನುಷ್ಯನಿಗೂ ಅರ್ಥವಾಗುವ ನೈಜ ಸತ್ಯವೊಂದು ಅದಕ್ಕೇಕೆ ಅರ್ಥವಾಗುತ್ತಿಲ್ಲವೋ ನಮಗೆ ಅರ್ಥವಾಗುತ್ತಿಲ್ಲ.

ಅದಾರೋ ಒಬ್ಬರು ಇತ್ತೀಚೆಗೆ ನಮ್ಮ ಬಳಿ ಬಂದು “ಬುದ್ಧೀ, ಕಾವೇರಿಯ ನೀರುಬಿಡುವ ವಿಷಯದಲ್ಲಿ ಅದು ಏಕೆ
“ಸುಪ್ರೀಂ ಕೋರ್ಟ್” ಹೀಗೆ ಆಡುತ್ತಿದೆ? ಇದೇನು ಉಚ್ಚ ನ್ಯಾಯಾಲಯವೋ ಅಥವಾ ‘….’ ನ್ಯಾಯಾಲಯವೋ?” ಎಂದು ಕೇಳಿದರು. ನಾವು ಅವರಿಗೆ, “ನಿಮ್ಮ ನೋವು ನಮಗರ್ಥವಾಗುತ್ತದೆ. ಆದರೆ ಉಚ್ಚ ನ್ಯಾಯಾಲಯಕ್ಕೆ ಹಾಗೆಲ್ಲ ‘….’ ನ್ಯಾಯಾಲಯ ಎಂದೆನ್ನಬಾರದು. ಹಾಗೆ ಅನ್ನಕೂಡದು. ಹಾಗೆ ಮಾಡಿದರೆ ಅದು ‘ನ್ಯಾಯಾಂಗ ನಿಂದನೆ’ ಮಾಡಿದಂತಾಗುತ್ತದೆ.

“ಅಹುದು, ಸುಪ್ರೀಂ ಕೋರ್ಟ್ ಈ ಬಾರಿ ತುಂಬ ವ್ಯತಿರಿಕ್ತವಾಗಿ ವರ್ತಿಸಿಕೊಂಡಿದೆ. ಕರ್ನಾಟಕದ ರೈತರಿಗೆ ಕುಡಿವ ನೀರಿಗೇನೇ ‘ತತ್ರಾಪಿ’ ಸ್ಥಿತಿ ನಿರ್ಮಾಣವಾಗಿರುವಾಗ ತಮಿಳುನಾಡಿನ ರೈತರ ಬೆಳೆಗೆ ನೀರು ಬಿಡಿ ಎಂದು ಮತ್ತೆ ಮತ್ತೆ ಆದೇಶ ನೀಡುವುದು ಅದಾವ ನ್ಯಾಯ ಎಂದು ಮಂಡ್ಯದ ರೈತರು ಕೇಳುತ್ತಿದ್ದಾರೆ.
ಈ ರೀತಿ ನ್ಯಾಯಾಲಯವು ಸಾರಾಸಾರ ವಿಚಾರ ಮಾಡದೆ ‘ಏಕಮುಖಿ’ ತೀರ್ಪು ನೀಡಿದರೆ ನ್ಯಾಯಾಂಗದ ಆದೇಶವನ್ನು ಉಲ್ಲಂಘಿಸದೆ ಬೇರೆ ದಾರಿಯೇ ಇಲ್ಲ. ಅನ್ಯಾಯಕ್ಕೆ ವೇದಿಕೆಯಾದವರೇ ನ್ಯಾಯಾಲಯದ ಮೊರೆಹೋಗುತ್ತಾರೆ ಎಂಬ ಸಾಮಾನ್ಯ ವಿವೇಕ ಮತ್ತು ವಿವೇಚನೆ ನ್ಯಾಯಾಲಯಕ್ಕೆ ಇರಬೇಕಿತ್ತು.

ರಾವಣ ಮಹಾಪಂಡಿತ ಮತ್ತು ಮಹಾಶಿವಭಕ್ತನಾದರೂ ಸಹ  ‘ಪರದಾರಾ’ ಅಪಹರಣದ ಮೂಲಕ ತನ್ನ ಘನತೆ, ಗೌರವಕ್ಕೆ ಚ್ಯುತಿ ತಂದುಕೊಂಡ. ಆತ ಬೇರೆಯವರ ನೀರೆಗಾಗಿ ಆಸೆಪಟ್ಟು ಹೆಸರು ಕೆಡಿಸಿಕೊಂಡ. ನ್ಯಾಯಾಲಯ ಅದೆಷ್ಟೇ ಮೇಧಾವಿಯಾಗಿದ್ದರೂ ಈಗ ನೀರಿನ ವಿಷಯದಲ್ಲಿ ಅದು ಕೂಡ ಆ ರಾವಣನ ಹಾಗೆ ಹೆಸರು ಕೆಡಿಸಿ ಕೊಳ್ಳುತ್ತಲಿದೆ.
ಇದುವರೆಗೆ ಎಲ್ಲಿಯೂ ನ್ಯಾಯ ಸಿಕ್ಕದೆ ಹೋದರೂ ನ್ಯಾಯಾಲಯದಲ್ಲಿಯಾದರೂ ನ್ಯಾಯ ಸಿಕ್ಕುತ್ತದೆ ಎಂಬ ಭರವಸೆ ಇತ್ತು. ಇದು ಕಾರಣವಾಗಿ ಜನಗಳು ಮತ್ತು ರಾಜ್ಯಗಳು ನ್ಯಾಯಾಲಯದ ಮೊರೆಹೋಗುತ್ತಿದ್ದವು. ಆದರೆ ಈವಾಗ ನ್ಯಾಯಾಲಯವೇ ಹೀಗೆ ಅಡ್ಡಾದಿಡ್ಡಿಯಗಿ ತೀರ್ಪು ನೀಡಿದರೆ ಇನ್ನಾರಿಗೆ ದೂರುವುದು?

ಈಗ ನಾವೆಲ್ಲ, “ತಾಯ್ ಮೊಲೆವಾಲು ನಂಜಾಗಿ ಕೊಲುವೊಡೆ ಇನ್ನಾರಿಗೆ ದೂರುವುದು?” ಎಂಬ ಪರಿಸ್ಥಿತಿ ಯಲ್ಲಿದ್ದೇವೆ. ಕರ್ನಾಟಕದ ಜನಗಳ ನೋವು ಮತ್ತು ಕರ್ನಾಟಕದ ರೈತರ ಗೋಳು ಮತ್ತು ರೈತರ ಆ ನೋವು, ಆ ‘ಹಾಯ್’ ಸಂಬಂಧಪಟ್ಟವರನ್ನು ಸುಮ್ಮನೇ ಬಿಡುವುದಿಲ್ಲ. ಈ ನಮ್ಮೆಲ್ಲ ನ್ಯಾಯಾಧೀಶರನ್ನೂ ಮೀರಿದ ಇನ್ನೊಬ್ಬ ನ್ಯಾಯಾಧೀಶನೊಬ್ಬನಿದ್ದಾನೆ ಎಂಬ ವಿಷಯವನ್ನು ಯಾರೂ ಕೂಡ ಮರೆಯುವಂತಿಲ್ಲ.

         ಡಾ.ಶ್ರೀ ಶ್ರೀ  ಶಿವಾನಂದ ಶಿವಾಚಾರ್ಯರು ಹಿರೇಮಠ, ತುಮಕೂರು
ಡಾ.ಶ್ರೀ ಶ್ರೀ
ಶಿವಾನಂದ ಶಿವಾಚಾರ್ಯರು
ಹಿರೇಮಠ, ತುಮಕೂರು

ಅಂಕಣಗಳು ಇನ್ನಷ್ಟು

ಪ್ರಮುಖ ಸುದ್ದಿಗಳುಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...