Oyorooms IN

Sunday, 20th August, 2017 10:54 PM

BREAKING NEWS

ತುಮಕೂರು

6 ಕ್ಕೆ 5 ಪ್ರಶ್ನೆಗಳನ್ನು ಕೊಟ್ಟ ತುಮಕೂರು ವಿವಿ: ಕನ್ನಡ ವಿಭಾಗದಲ್ಲಿ ಮತ್ತೊಂದು ಅವಾಂತರ

ತುಮಕೂರು: ಜಿಲ್ಲೆಗೊಂದು ವಿಶ್ವವಿದ್ಯಾಲಯ ಇರಲಿ ಎನ್ನುವ ಕಾರಣಕ್ಕೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಬೇರ್ಪಟ್ಟು ಸ್ಥಾಪನೆಯಾದ ತುಮಕೂರು ವಿಶ್ವವಿದ್ಯಾಲಯ ಸ್ಥಾಪನೆಗೊಂಡು 10 ವರ್ಷಗಳಾದರು ಅವಾಂತರಗಳಿಂದ ಹೊರಬಂದಿಲ್ಲ.

ಕನ್ನಡ ವಿಭಾಗದಲ್ಲಿ ಪಿಎಚ್ ಡಿ ಹಗರಣ ನಡೆದ ನಂತರ ಈಗ ಮತ್ತೊಂದು ಅವಾಂತರ ಕನ್ನಡ ವಿಭಾಗದಲ್ಲಿ ನಡೆದಿದೆ, ಡಾ.ವಿ.ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಪ್ರಥಮ ವರ್ಷದ ಎಂ.ಎ. ಪ್ರಥಮ ಸೆಮಿಸ್ಟರ್ ಪರೀಕ್ಷೆಯಲ್ಲಿ ಕನ್ನಡ ಆಧುನಿಕ ಕಾವ್ಯ ವಿಶೇಷ ಪಠ್ಯ-ಶ್ರೀರಾಮಾಯಣದರ್ಶನಂ ವಿಷಯದ ಪ್ರಶ್ನೆ ಪತ್ರಿಕೆಯಲ್ಲಿ ಆರು ಪ್ರಶ್ನೆಗಳಿಗೆ ಬದಲಾಗಿ 5 ಪ್ರಶ್ನೆಗಳನ್ನು ಮಾತ್ರ ಕೇಳಲಾಗಿದ್ದು, ಪ್ರಶ್ನೆ ಪತ್ರಿಕೆಯನ್ನು ನೋಡಿ ಕಂಗಾಲಾದ ವಿದ್ಯಾರ್ಥಿಗಳು ಕೇಳಿದ ಮೇಲೆ ಪರೀಕ್ಷಾ ವಿಭಾಗದ ಮುಖ್ಯಸ್ಥ ನಿತ್ಯಾನಂದ ಶೆಟ್ಟಿ ಪರೀಕ್ಷೆಯ ಕೊಠಡಿಯಲ್ಲಿ ವಿದ್ಯಾರ್ಥಿಗಳಿಗೆ ಇನ್ನೊಂದು ಪ್ರಶ್ನೆಯನ್ನು ನೇರವಾಗಿ ಬರೆಸುವ ಮೂಲಕ, ಪರೀಕ್ಷಾಂಗದ ನಿಯಾಮವಳಿಯನ್ನು ಉಲ್ಲಂಘಿಸಿದ್ದಾರೆ ಎಂದು ಎಬಿವಿಪಿ ಆರೋಪಿಸಿದೆ.

ಪಶ್ನೆ ಪತ್ರಿಕೆ ದೋಷದ ಕುರಿತು ಕುಲಪತಿ ಪ್ರೊ.ಎ.ಎಚ್.ರಾಜಾಸಾಬ್ ಅವರನ್ನು ಭೇಟಿ ಮಾಡಿದ್ದ ಎಬಿವಿಪಿ ನಿಯೋಗಕ್ಕೆ , ಪ್ರಶ್ನೆ ಪತ್ರಿಕೆ ದೋಷ ದೊಡ್ಡದೇನೆಲ್ಲಾ ಬಿಡಿ ಎಂದು ಬೇಜವಾಬ್ದಾರಿ ಉತ್ತರವನ್ನು ನೀಡಿದ್ದಲ್ಲದೆ, ಪ್ರಶ್ನೆ ಪತ್ರಿಕೆ ದೋಷಕ್ಕೆ ಕಾರಣವಾಗಿರುವ ಪರೀಕ್ಷಾಂಗದ ಮುಖ್ಯಸ್ಥ ನಿತ್ಯಾನಂದ ಶೆಟ್ಟಿ ಅವರು ಸೇರಿದಂತೆ ನಾಲ್ವರು ಸದಸ್ಯರನ್ನು ರಕ್ಷಿಸುತ್ತಿದ್ದೀರಾ ಎಂದು ಎಬಿವಿಪಿ ಕಾರ್ಯಕರ್ತರು ಪ್ರೊ.ಎಚ್.ಎಚ್.ರಾಜಾಸಾಬ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪ್ರಶ್ನೆ ಪತ್ರಿಕೆ ದೋಷಕ್ಕೆ ಕಾರಣವಾಗಿರುವರನ್ನು ಅಮಾನತು ಪಡಿಸಬೇಕು ಹಾಗೂ ಪರೀಕ್ಷಾಂಗದ ಯಾವುದೇ ಚಟುವಟಿಕೆಯಲ್ಲಿ ಭಾಗವಹಿಸಿದಂತೆ ನಿರ್ಬಂಧ ವಿಧಿಸಬೇಕೆಂದು ಎಬಿವಿಪಿ ಮುಖಂಡರು ಒತ್ತಾಯಿಸಿದಾಗ, ಕುಲಸಚಿವ ಪರಮಶಿವಯ್ಯ ಅವರು ” ಎಲ್ಲರನ್ನು ಅಮಾನತು ಮಾಡುತ್ತಾ ಹೋದರೆ, ಕನ್ನಡ ವಿಭಾಗವನ್ನು ನಡೆಸುವುದಾದರು ಹೇಗೆ”ಎಂದು ಎಬಿವಿಪಿ ಕಾರ್ಯಕರ್ತರನ್ನೇ ಪ್ರಶ್ನಿಸಿದ್ದಾರೆ, ಇದರಿಂದ ಆಕ್ರೋಶಿತಗೊಂಡ ಕಾರ್ಯಕರ್ತರು ಹಾಗೂ ಕುಲಸಚಿವ ಪರಮಶಿವಯ್ಯ ಮಧ್ಯೆ ಮಾತಿನ ಚಕಮಕಿ ನಡೆಯಿತು.

ಎಬಿವಿಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಸಿದ ನಂತರ ಕುಲಪತಿ ಪ್ರೊ.ಎ.ಎಚ್.ರಾಜಾಸಾಬ್, ತನಿಖಾ ತಂಡ ರಚಿಸಿ, ಪ್ರಕರಣದ ತನಿಖೆ ನಡೆಸುವುದಾಗಿ ಹಾಗೂ ಪ್ರಶ್ನೆ ಪತ್ರಿಕೆ ದೋಷಕ್ಕೆ ಕಾರಣವಾದ 5ಜನರ ಮೇಲೆ ಕ್ರಮ ಕೈಗೊಳ್ಳುವುದಾಗಿ  ಭರವಸೆ ನೀಡಿದ್ದಾರೆ. ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಹೆಸರಾಗಬೇಕಾಗಿದ್ದ ತುಮಕೂರು ವಿಶ್ವವಿದ್ಯಾಲಯ ತನ್ನ ಅವಾಂತರಗಳಿಂದ ಕೆಟ್ಟ ಹೆಸರು ಪಡೆಯುತ್ತಿರುವುದು ಮಾತ್ರ ದುರದೃಷ್ಟಕರ.

English summary: tumakuru university question paper problem

 

ತುಮಕೂರು ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...