Oyorooms IN

Tuesday, 25th April, 2017 3:51 AM

BREAKING NEWS

ತುಮಕೂರು

 ಮಳೆಯ ಕೊರತೆ ನೆಲಕಚ್ಚಿದ ಬೆಳೆ -139 ಕೋಟಿ ರೂ ಬೆಳೆನಾಶ

dc-1

ತುಮಕೂರು: ಮುಂಗಾರು ಮಳೆಯ ಕಣ್ಣಾಮುಚ್ಚಾಲೆಯಿಂದಾಗಿ ಕೃಷಿ ಬೆಳೆಗಳು ನೆಲಕಚ್ಚಿದ್ದು,ಬಿತ್ತನೆಯಾಗಿದ್ದ ಶೇ೩೫ಕ್ಕೂ ಹೆಚ್ಚು ಬೆಳೆಹಾನಿ ಸಂಭವಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು ಹಾಗೂ139.9ಕೋಟಿ ರೂ ಇನ್‌ಪುಟ್ ಸಬ್ಸಿಡಿ ನೀಡುವಂತೆ ಸರಕಾರಕ್ಕೆ ಜಿಲ್ಲಾಡಳಿತ ಪ್ರಸ್ತಾವನೆ ಕಳುಹಿಸಿದೆ.

ಜಿಲ್ಲೆಗೆ ನಿರೀಕ್ಷೆಯಷ್ಟು ಮಳೆ ಬರದಿದ್ದರೂ ಬಂದಿರುವ ಮಳೆಯೂ ಸಕಾಲದಲ್ಲಿ ಬರದೆ ವಿವಿಧ ಕಡೆಗಳಲ್ಲಿ ಚದುರಿದ ಮಳೆಯಾಗಿ ಸೆಪ್ಟೆಂಬರ್ ತಿಂಗಳು ಮುಗಿದು ಅಕ್ಟೋಬರ್ ತಿಂಗಳು ಬಂದರು, ಪೂರ್ಣ ಪ್ರಮಾಣದಲ್ಲಿ ಬಿತ್ತನೆಯಾಗದೆ ಶೇ..72.05 ರಷ್ಟು ಬಿತ್ತನೆಯಾಗಿದ್ದು,ಮಳೆಯ ಅಭಾವದಿಂದ ಬಿತ್ತನೆಯಾದ ಬೆಳೆಗಳೂ ಒಣಗುತ್ತುವೆ,ಜಿಲ್ಲೆಯಾದ್ಯಂತ ಜನವರಿಯಿಂದ ಸೆಪ್ಟಂಬರ್ ಅಂತ್ಯದವರೆವಿಗೆ ವಾಡಿಕೆ ಮಳೆ 487.1 ಮಿ.ಮೀ. ಇದ್ದು, ಇಲ್ಲಿಯವರೆಗೆ 451.1 ಮಿ.ಮಿ.ನಷ್ಟು ಮಳೆಯಾಗಿದ್ದು, ಶೇ.೭ರಷ್ಟು ಮಳೆ ಕೊರತೆಯಾಗಿದೆ. ಕಳೆದ 2005ನೇ ಸಾಲಿನಲ್ಲಿ ಇದೇ ಅವಧಿಗೆ ೫೧೪.೧ ಮಿ.ಮೀ ಮಳೆಯಾಗಿತ್ತು.

dc-2

ಪ್ರಸ್ತುತ ಸಾಲಿನ ಮುಂಗಾರು ಹಂಗಾಮಿನಲ್ಲಿ 355 ಮಿ.ಮೀ ವಾಡಿಕೆ ಮಳೆ ಇದ್ದು,ಒಟ್ಟು 343.7 ಮಿ.ಮೀ. ಮಳೆಯಾಗಿದ್ದು, ಶೇ.3ರಷ್ಟು ಮಳೆ ಕೊರತೆಯಾಗಿದೆ. ಕಳೆದ 2015ನೇ ಸಾಲಿನಲ್ಲಿ ಇದೇ ಅವಧಿಗೆ 328.7 ಮಿ.ಮೀ ಮಳೆಯಾಗಿತ್ತು. 2016ನೇ ಸಾಲಿನ ಆಗಸ್ಟ್ ಮಾಹೆಯಲ್ಲಿ ವಾಡಿಕೆ ಮಳೆ 80.9 ಮಿ.ಮೀ ಇದ್ದು, ಕೇವಲ 32 ಮಿ.ಮೀ ಮಾತ್ರ ವಾಸ್ತವಿಕವಾಗಿ ಮಳೆಯಾಗಿದ್ದು, ಶೇ.60ರಷ್ಟು ಮಳೆ ಕೊರತೆಯಾಗಿದೆ.ಜಿಲ್ಲೆಯ 10 ತಾಲೂಕುಗಳಲ್ಲಿ ಅತ್ಯಲ್ಪ ಪ್ರಮಾಣದ ಮಳೆ ಆಗಿರುವುದರಿಂದ ಪ್ರಸಕ್ತ ಸೆಪ್ಟೆಂಬರ್ ಮಾಹೆಯಲ್ಲಿ ಶೇ.75ರಿಂದ ಶೆ.97ರವರೆಗೆ ಮಳೆಯ ಕೊರತೆಯಾದ ಕಾರಣ ಬೆಳೆಯ ನಿರ್ಣಾಯಕ ಹಂತಗಳಾದ ತೆಂಡೆ ಹೊಡೆಯುವಿಕೆ, ಬೆಳವಣಿಗೆ ಹಂತ, ಹೂವು ಮತ್ತು ಹೂಡು ಇಳಿಯುವ ಹಂತಗಳಲ್ಲಿ ಪರಿಣಾಮ ಬೀರಿ ಇಳುವರಿಯು ಕುಂಠಿತವಾಗಿದೆ.

ಬೆಳೆ ಪರಿಸ್ಥಿತಿ: ರಾಗಿ ಮತ್ತು ನೆಲಗಡಲೆ ಬೆಳೆ ಜಿಲ್ಲೆಯಲ್ಲಿ ಮುಖ್ಯ ಬೆಳೆಯಾಗಿದ್ದು,ಆನಂತರ ಸ್ಥಾನದಲ್ಲಿ ಭತ್ತ, ಮುಸುಕಿನಜೋಳ ಹಾಗೂ ತೊಗರಿ ಬೆಳೆಗಳನ್ನು ಜಿಲ್ಲೆಯಲ್ಲಿ ಬೆಳೆಯಲಾಗುತ್ತದೆ. ಕಳೆದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಅಲ್ಲಲ್ಲಿ ಚದುರಿದಂತೆ ಮಳೆಯಾದ ಕಾರಣ ಪೂರ್ಣ ಪ್ರಮಾಣದಲ್ಲಿ ಬಿತ್ತನೆ ಕೈಗೊಳ್ಳಲು ಸಾಧ್ಯವಾಗಿರುವುದಿಲ್ಲ. ಪೂರ್ವ ಮುಂಗಾರು ಬೆಳೆಗಳಾದ ಹೆಸರು ಮತ್ತು ಉದ್ದು ಸಾಮಾನ್ಯವಾಗಿ 1600 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಬೇಕಾಗಿತ್ತು. ಕೇವಲ 3610 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಮತ್ತು ೨೮೩ ಹೆಕ್ಟೇರ್ ಪ್ರದೇಶದಲ್ಲಿ ಉದ್ದು ಬಿತ್ತನೆಯಾಗಿದೆ.

ಜಿಲ್ಲೆಯಲ್ಲಿ ಶೇಂಗಾ ಬೆಳೆ ಶೇ.72.05 ರಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿದ್ದರೂ ಜಿಲ್ಲೆ ಬರದ ಛಾಯೆ ಕಾಣಿಸುತ್ತಿದೆ. ಅಲ್ಲಲ್ಲಿ ಚದುರಿದಂತೆ ಬಂದ ಮಳೆಯಿಂದಾಗಿ ಸಕಾಲದಲ್ಲಿ ಬಿತ್ತನೆ ಮಾಡಲು ಸಾಧ್ಯವಾಗದೆ ಕೃಷಿ ಚಟುವಟಿಕೆಯು ಕುಂಠಿತಗೊಂಡಿದೆ.

dc-3

ಮುಂಗಾರು ಹಂಗಾಮಿನಲ್ಲಿ ಒಟ್ಟು 4,35013 ಹೆಕ್ಟರ್ ಪ್ರದೇಶದಲ್ಲಿ ವಿವಿಧ ಕೃಷಿ ಬೆಳೆಗಳು ಬಿತ್ತನೆಯಾಗಬೇಕಿತ್ತು. ಇದುವರೆಗೆ ಕೇವಲ 3,13535 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, 2.30235 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿ ಶೇ.72.05 ರಷ್ಟು ಬಿತ್ತನೆಯಾಗಿದ್ದರೂ ಸಹ ಬಿತ್ತನೆ ಸಮಯದಲ್ಲಿ ಸುರಿದ ಮಳೆ ಬಿತ್ತನೆ ನಂತರ ಕೈಕೊಟ್ಟ ಪರಿಣಾಮ ರೈತರು ಕಂಗಾಲಾಗಿದ್ದಾರೆ.ಜಿಲ್ಲೆಯ ಶೇಂಗಾ ಗುರಿ 1,27,502 ಹೆಕ್ಟೇರ್ ಪ್ರದೇಶಕ್ಕೆ 93951 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದು, ಈ ಪೈಕಿ 80249ಹೆಕ್ಟೇರ್ (ಶೇ.85.42) ಪ್ರದೇಶವು ಶೇ.33ಕ್ಕಿಂತ ಹೆಚ್ಚು ಬೆಳೆ ಹಾನಿಯಾಗಿದೆ.ರಾಗಿ ಬೆಳೆಯು 178600 ಹೆಕ್ಟೇರ್ ಪ್ರದೇಶಕ್ಕೆ 143580 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದು, ಈ ಪೈಕಿ 87988 ಹೆಕ್ಟೇರ್ (ಶೇ.61.28) ಪ್ರದೇಶವು ಶೇ.೩೩ಕ್ಕಿಂತ ಹೆಚ್ಚು ಬೆಳೆ ಹಾನಿಯಾಗಿದೆ.

ಮುಸುಕಿನ ಜೋಳ 34112 ಹೆಕ್ಟೇರ್ ಪ್ರದೇಶಕ್ಕೆ 26707 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದು, ಈ ಪೈಕಿ 21045 ಹೆಕ್ಟೇರ್ (ಶೇ.78.80) ಪ್ರದೇಶವು ಶೇ.೩೩ಕ್ಕಿಂತ ಹೆಚ್ಚು ಬೆಳೆಹಾನಿಯಾಗಿದ್ದು, ಒಟ್ಟಾರೆ 139.9 ಕೋಟಿ ರೂ. ಇನ್‌ಫುಟ್ ಸಬ್ಸಿಡಿಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ.

dc-4

ಹೆಸರು ಸಂಪೂರ್ಣ ವಿಫಲ: ಪೂರ್ವ ಮುಂಗಾರಿನಲ್ಲಿ ಜಿಲ್ಲೆಯ ಚಿಕ್ಕನಾಯಕನಹಳ್ಳಿ, ತಿಪಟೂರು, ತುರುವೇಕೆರೆ, ಗುಬ್ಬಿ ಮತ್ತಿತರೆ ಕಡೆಗಳಲ್ಲಿ ಬಿತ್ತನೆಯಾಗಿದ್ದ ಹೆಸರುಬೆಳೆ ಮಳೆ ಕೊರತೆಯಿಂದಾಗಿ ಸಂಪೂರ್ಣ ವಿಫಲಗೊಂಡಿದೆ.

ಶೇಂಗಾ ಬಿತ್ತನೆ ಕುಂಠಿತ: ಜಿಲ್ಲೆಯ ರೈತರ ಪ್ರಮುಖ ವಾಣಿಜ್ಯ ಬೆಳೆಯಾದ ಶೇಂಗಾ ಕಳೆದ ಐದಾರು ವರ್ಷಗಳಿಂದಲೂ ಬಿತ್ತನೆಯಲ್ಲಿ ಕುಂಠಿತ ಉಂಟಾಗಿ ರೈತರು ಕಂಗಾಲಾಗಿದ್ದರು. ಈ ವರ್ಷವೂ ಜಿಲ್ಲೆಯಲ್ಲಿ ಮಳೆಯಿಲ್ಲದೆ ಶೇಂಗಾ ಬಿತ್ತನೆ ಕುಂಠಿತ ಉಂಟಾಗಿ ಪಾವಗಡ, ಶಿರಾ, ಕೊರಟಗೆರೆ ಮತ್ತು ಮಧುಗಿರಿ ತಾಲ್ಲೂಕುಗಳಲ್ಲಿ ಬರಗಾಲದ ಛಾಯೆ ಆವರಿಸಿದೆ.

ಮಳೆ ಆಶ್ರಯದಲ್ಲೇ ಶೇಂಗಾ ಬೆಳೆಯುತ್ತಿದ್ದು, ಶೇಂಗಾ ಬೆಳೆ ಹೂವಿನ ಹಂತದಿಂದ ಹೂಡು ಬಿಡುವ ಹಂತದಲ್ಲಿದೆ. ಈ ತಿಂಗಳ ಅಂತ್ಯದವರೆಗೂ ರಾಗಿ ನಾಟಿಮಾಡಲು ಅವಕಾಶವಿದ್ದರೂ ಮಳೆ ಕೈಕೊಟ್ಟಿರುವುದರಿಂದ ರಾಗಿ ಬಿತ್ತನೆಯಲ್ಲೂ ಕುಂಠಿತ ಉಂಟಾಗಲಿದೆ.ಸಕಾಲಕ್ಕೆ ಮಳೆಬಾರದೆ ಜಿಲ್ಲೆಯ ನೆಲಗಡಲೆ ಬೆಳೆಯುವ ಪ್ರದೇಶದಲ್ಲಿ ಶೇ.50ಕ್ಕಿಂತ ಕಡಿಮೆ ಬೆಳೆ ನಿರೀಕ್ಷಿಸಿದ್ದು, ಬಹಳಷ್ಟು ಕಡೆ ನೆಲಗಡಲೆ ಹಾಕಿದ ರೈತರು ಚಿಂತೆಗೀಡಾಗಿದ್ದಾರೆ.

ಈ ವರ್ಷವೂ ಎದುರಾಗಲಿದೆ ಬರಗಾಲ: ಕಳೆದ ಐದಾರು ವರ್ಷಗಳಿಂದ ಮಳೆಯಿಲ್ಲದೆ ಜಿಲ್ಲೆಯನ್ನು ರಾಜ್ಯ ಸರಕಾರ ಬರಗಾಲ ಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಿತ್ತು. ಈ ಭಾರಿಯೂ ಈ ಜಿಲ್ಲೆ ಬರಪೀಡಿತ ಜಿಲ್ಲೆಯೆಂದು ಸರಕಾರ ಘೋಷಣೆ ಮಾಡಬೇಕೆಂದು ಜಿಲ್ಲಾಡಳಿತದಿಂದ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಜಿಲ್ಲೆಯಲ್ಲಿ ಬೀಳುತ್ತಿರುವ ಮಳೆಯ ಪ್ರಮಾಣ ಮತ್ತು ಬಿತ್ತನೆಯಾಗಿರುವ ಬೆಳೆ ಪ್ರಮಾಣ ಮತ್ತು ಬಿತ್ತನೆ ಮಾಡಿರುವ ಕಡೆಗಳಲ್ಲಿ ಮಳೆಯಿಲ್ಲದೆ ಬೆಳೆ ಒಣಗುತ್ತಿರುವುದು ನೋಡಿದರೆ ಈ ವರ್ಷವೂ ಮಳೆಯ ಕೊರತೆ ಬೆಳೆಯ ವಿಫಲತೆಯಿಂದ ಬರಗಾಲ ಎದುರಾಗುವ ಮುನ್ಸೂಚನೆಗಳು ಗೋಚರಿಸಿವೆ.

dc

ಜುಲೈ ಅಂತ್ಯದವರೆಗೆ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು,ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ವಾಡಿಕೆಗಿಂತಲೂ ತೀರಾಕಡಿಮೆ ಮಳೆಯಾಗಿದೆ.ಬಿತ್ತನೆ ಪ್ರಮಾಣವೂ ಕಡಿಮೆಯಾಗಿದ್ದು, ಬಿತ್ತನೆಯಾದ ಪ್ರದೇಶದಲ್ಲಿ ಶೇ.33ಕ್ಕಿಂತಲೂ ಹೆಚ್ಚು ಬೆಳೆ ಹಾನಿಯಾದ ಪರಿಣಾಮ ಸರಕಾರದ ನಿಯಮದಂತೆ 139.9 ಕೋಟಿ ರೂ. ಇನ್‌ಫುಟ್ ಸಬ್ಸಿಡಿ ಪಡೆಯಲು ಜಿಲ್ಲೆಯು ಅರ್ಹತೆ ಹೊಂದಿದ್ದು,ಈ ಇನ್‌ಫುಟ್ ಸಬ್ಸಿಡಿ ಹಣವನ್ನು ಜಿಲ್ಲೆಗೆ ಬಿಡುಗಡೆ ಮಾಡಬೇಕೆಂದು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜೊತೆಗೆ ಜಿಲ್ಲೆಯ 10 ತಾಲೂಕುಗಳಲ್ಲೂ ಬರದ ಛಾಯೆ ಆವರಿಸಿರುವುದರಿಂದ ತುಮಕೂರು ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯೆಂದು ಘೋಷಣೆ ಮಾಡಬೇಕೆಂಬ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿದೆ.

-ಕೆ.ಪಿ.ಮೋಹನ್‌ರಾಜ್, ಜಿಲ್ಲಾಧಿಕಾರಿ

ತುಮಕೂರು ಇನ್ನಷ್ಟು

ಪ್ರಮುಖ ಸುದ್ದಿಗಳು



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...