Oyorooms IN

Friday, 23rd June, 2017 12:30 PM

BREAKING NEWS

ಉಡುಪಿ

ಉಡುಪಿಯಲ್ಲಿ ಕನಕ ನಡೆ ಕಾರ್ಯಕ್ರಮಕ್ಕೆ ಚಾಲನೆ

udupi

ಉಡುಪಿ: ಭಾರೀ ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಗಿರುವ ಕನಕ ನಡೆ ಕಾರ್ಯಕ್ರಮ ಪೊಲೀಸರ ವಿರೋಧದ ನಡುವೆಯೇ ಶುರುವಾಗಿದೆ.
ಉಡುಪಿಯಲ್ಲಿ ಕನಕನ ಮೂರ್ತಿಗೆ ಹೂವಿನ ಹಾರ ಹಾಕಿ ಕನಕ ನಡಿಗೆಗೆ ಚಾಲನೆ ನೀಡಿ ಮಾತಾಡಿದ ಪೇಜಾವರ ಶ್ರೀಗಳು, ಎಲ್ಲರ ಅಂತರಂಗ ಶುದ್ಧೀಕರಣವಾಗಲಿ. ರಸ್ತೆಗಳು, ಉದ್ಯಾನ, ಸ್ವಚ್ಛವಾಗಬೇಕು. ಕನಕ ನಡೆ ಸರ್ಕಾರದ ಆದೇಶದಂತೆ ನಡೆಯುತ್ತದೆ. ಆದೇಶದ ವಿರುದ್ಧ ಕೆಲಸ ಮಾಡುವುದಿಲ್ಲ. ದೇಶಾದ್ಯಂತ ಈ ಅಭಿಯಾನ ನಡೆಯಬೇಕು ಅಂದ್ರು.
ಕಾರ್ಯಕ್ರಮದಲ್ಲಿ ಶಿರೂರು ಸ್ವಾಮೀಜಿ, ಚಕ್ರವರ್ತಿ ಸೂಲಿಬೆಲೆ ಉಪಸ್ಥಿತರಿದ್ದಾರೆ. ಸುಮಾರು 500 ಯುವ ಬ್ರಿಗೇಡ್ ಕಾರ್ಯಕರ್ತರು ಸ್ಚಚ್ಛತಾ ಕಾರ್ಯ ಮಾಡಿದ್ರು.
ಇದೇ ವೇಳೆ ಮಾತನಾಡಿದ ಯುವಬ್ರಿಗೇಡ್ ಮುಖಂಡ ಚಕ್ರವರ್ತಿ ಸೂಲಿಬೆಲೆ, ಯುವ ಬ್ರಿಗೇಡ್‌ಗೆ ಇಂದು ಡೂಮ್ಸ್ ಡೇ. ಈ ದಿನಕ್ಕಾಗಿ ನಾವೆಲ್ಲರೂ ಕಾಯುತ್ತಿದ್ದೆವು. ಕನಕ ನಡೆ ಕೃಷ್ಣಮಠಕ್ಕೆ ಸೀಮಿತ ಮಾಡಿದ್ದೇವೆ. ರಸ್ತೆಗೆ ಇಳಿಯೋದಿಲ್ಲ, ಸರ್ಕಾರದ ಆದೇಶ ಧಿಕ್ಕರಿಸಲ್ಲ. ಚಲೋ ಉಡುಪಿಗೆ ಇದು ಪರ್ಯಾಯ ಅಲ್ಲ. ನಾವು ದಲಿತ ವಿರೋಧಿಯೂ ಅಲ್ಲ. ಕನಕ ನಡೆಯಲ್ಲಿ ಹೆಚ್ಚು ದಲಿತರೇ ಇದ್ದಾರೆ. ಕನಕನ ಮಾರ್ಗದಲ್ಲಿ ಕೃಷ್ಣನನ್ನು ನೋಡುತ್ತೇವೆ ಅಂತ ಹೇಳಿದ್ರು.

udupi-1
ಕನಕ ನಡೆ ಸ್ವಚ್ಛತಾ ಅಭಿಯಾನಕ್ಕೆ ಭಾರೀ ಪೊಲೀಸ್ ಬಂದೋಬಸ್ತ್ ನೀಡಲಾಗಿದೆ. ಅಷ್ಟಮಠದ ? ರಥಬೀದಿಯ ಸುತ್ತ ಒಂದು ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ.
ಎಂಟೂ ಮಠಗಳ ಮುಂಭಾಗದಲ್ಲಿ, ರಥಬೀದಿಗೆ ಬರುವ ಆರು ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನ ಹಾಕಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ 5 ಕೆಎಸ್‌ಆರ್‍ಪಿ ತುಕಡಿ, 10 ಡಿಎಆರ್ ಪೊಲೀಸ್ ಟೀಂ, 3 ಮಂದಿ ಡಿವೈಎಸ್‌ಪಿ ನೇತೃತ್ವದಲ್ಲಿ ಮಠದ ಸುತ್ತ ಬಿಗಿ ಪೊಲೀಸ್ ಭದ್ರತೆ ನೀಡಲಾಗಿದೆ.
ಚಲೋ ಉಡುಪಿ ಜಾಥಾ ನಡೆದ ಬೆನ್ನಲ್ಲೇ ಯುವ ಬ್ರಿಗೇಡ್ ಕನಕ ನಡೆ- ಸ್ವಚ್ಛತಾ ಅಭಿಯಾನ ಕೈಗೊಂಡಿದ್ದು ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಅನುಮತಿ ನೀಡಿಲ್ಲ. ಸರ್ಕಾರದ ಆದೇಶಕ್ಕೆ ವಿರುದ್ಧವಾಗಿ ಯುವ ಬ್ರಿಗೇಡ್ ಮಠ ಮತ್ತು ಮಠದ ಸುತ್ತಮುತ್ತ ಸ್ವಚ್ಛತಾ ಕಾರ್ಯಕ್ರಮ ನಡೆಸಿದೆ.

ಉಡುಪಿ ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...