Oyorooms IN

Thursday, 27th July, 2017 4:11 AM

BREAKING NEWS

ಪ್ರಮುಖ ಸುದ್ದಿಗಳು

ದೈವಭಕ್ತನಾದ ಉಮೇಶ್ ರೆಡ್ಡಿ, ಆಕ್ಸಿಡೆಂಟ್ ನಲ್ಲಿ ಸತ್ತೆ ಅಂದ್ಕೋ..!!

umesh

ಬೆಳಗಾವಿ: ವಿಕೃತಕಾಮಿ ಉಮೇಶ್ ರೆಡ್ಡಿ ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿ ವಜಾಗೊಂಡಿರುವ ಪ್ರತಿ ಸಿಕ್ಕಿದ್ದು, ಮರಣದಂಡನೆ ವಿಧಿಸಿದ್ದ ನ್ಯಾಯಾಲಯ ಈಗ ಬ್ಲ್ಯಾಕ್ ವಾರೆಂಟ್ ಹೊರಡಿಸಬೇಕಿದ್ದು, ನೇಣು ಕುಣಿಕೆಗೆ ಹತ್ತಿರವಾಗುತ್ತಿರುವ ಉಮೇಶ್ ರೆಡ್ಡಿ ದೇವರ ಧಾನ್ಯದಲ್ಲಿ ಮಗ್ನನಾಗಿದ್ದಾನೆ.

ನಾಸ್ತಿಕನಾಗಿದ್ದ ಉಮೇಶ್ ರೆಡ್ಡಿ ಸುಪ್ರೀಂಕೋರ್ಟ್ ಅರ್ಜಿಯನ್ನು ವಜಾಗೊಳಿಸುತ್ತಿದ್ದಂತೆ ದೇವರ ಮೊರೆ ಹೋಗಿದ್ದು, ದಿನಕ್ಕೆ ಎರಡು ಬಾರಿ ದೇವರ ದರ್ಶನವನ್ನು ಪಡೆಯುತ್ತಿದ್ದಾನೆ ಎನ್ನಲಾಗಿದ್ದು, ಸೋಮವಾರ ರೆಡ್ಡಿ ಪರ ವಕೀಲರು ಮತ್ತೊಮ್ಮೆ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿದ್ದಾರೆ.

ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ಉಮೇಶ್ ರೆಡ್ಡಿ ತನ್ನ ತಾಯಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದು, ರಸ್ತೆ ಅಪಘಾತದಲ್ಲಿ ಬೇರೆಯವರು ಸಾವನ್ನಪ್ಪಿದ್ದಂತೆ, ನಾನು ಸತ್ತಿದ್ದೇನೆ ಎಂದು ಭಾವಿಸುವಂತೆ ತಾಯಿಗೆ ಹೇಳಿದ್ದಾನೆ, ತಾನು ಉಪಯೋಗಿಸುತ್ತಿದ್ದ ಬುಕ್, ಫೋಟೋ ಆಲ್ಬಮ್ ಗಳನ್ನು ಜೈಲಿನ ಅಧಿಕಾರಿಗಳಿಗೆ ವಾಪಸ್ ನೀಡಿದ್ದಾನೆ ಎನ್ನುವ ಮಾಹಿತಿಗಳು ಜೈಲಿನಿಂದ ಹೊರಬಂದಿವೆ.

English summary: umesh reddy convict hanging

ಪ್ರಮುಖ ಸುದ್ದಿಗಳು ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...