Oyorooms IN

Tuesday, 25th April, 2017 2:06 PM

BREAKING NEWS

ದಾವಣಗೆರೆ

ಒಂದು ಲೀಟರ್ ಸೀಮೆಎಣ್ಣೆ ವಿತರಿಸಲು ಕ್ರಮ: ಯು.ಟಿ.ಖಾದರ್

ದಾವಣಗೆರೆ: ಪಡಿತರ ಕಾರ್ಡಿಗೆ ಒಂದು ಲೀಟರ್ ಸೀಮೆ ಎಣ್ಣೆ ವಿತರಣೆ ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಧರ್ಮೆಂದ್ರ ಪ್ರಧಾನ್ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಸಚಿವ ಯು.ಟಿ.ಖಾದರ್ ದಾವಣಗೆರೆಯಲ್ಲಿ ಹೇಳಿದ್ದಾರೆ. ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯಡಿ ಸೀಮೆಎಣ್ಣೆ ಮುಕ್ತ ದೇಶದತ್ತ ಹೆಜ್ಜೆ ಇಟ್ಟಿದ್ದು ಗ್ರಾಹಕರು ಸೀಮೆಎಣ್ಣೆಗಾಗಿ ಬೇಡಿಕೆ ಇಟ್ಟಿದ್ದಾರೆ.

ut-khadar

ಕನಿಷ್ಟ ಒಂದು ಲೀಟರ್ ಸೀಮೆಎಣ್ಣೆ ಪ್ರತಿ ಕಾರ್ಡಿಗೆ ಸಿಗುವ ವ್ಯವಸ್ಥೆ ಅತ್ಯಗತ್ಯ ಎಂಬುದು ಗ್ರಾಹಕರ ಮನವಿಯಾಗಿದ್ದು, ಕನಿಷ್ಠ ಒಂದು ಲೀಟರ್ ಪ್ರತಿ ಕಾರ್ಡಿಗೆ ಸಿಗುವ ವ್ಯವಸ್ಥೆಯಾಗಬೇಕು ಎಂದು ಧರ್ಮೇಂದ್ರ ಪ್ರಧಾನ್ ಅವರಿಗೆ ಮನವಿ ಮಾಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೇಂದ್ರ ಸರ್ಕಾರ ಮನವಿ ಪುರಸ್ಕರಿಸದಿದ್ದರೆ ಮುಕ್ತ ಮಾರುಕಟ್ಟೆಯಲ್ಲಿ ಸೀಮೆಎಣ್ಣೆ ಲಭ್ಯವಾಗುವಂತೆ ನೋಡಿಕೊಳ್ಳಲಾಗುವುದರ ಜೊತೆಗೆ ಹೆಚ್ಚುವರಿ ಎಲ್ಪಿಜಿ ಸಿಲಿಂಡರ್ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಯು.ಟಿ.ಖಾದರ್ ಹೇಳಿದ್ದಾರೆ.

English summary: ut Khadar assure lpg

ದಾವಣಗೆರೆ ಇನ್ನಷ್ಟು

ಪ್ರಮುಖ ಸುದ್ದಿಗಳು



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...