Oyorooms IN

Wednesday, 25th January, 2017 6:50 AM

BREAKING NEWS

ಅಂಕಣಗಳು

ಕಾರ್ಗಿಲ್‌ ವಿಜಯ್‌ ದಿವಸ : ಈ ಸೈನಿಕನನ್ನು ನೆನಪು ಮಾಡಿಕೊಳ್ಳದಿದ್ದರೇ ಹೇಗೆ?

ಕಾರ್ಗಿಲ್‌ ವಿಜಯ್‌ ದಿವಸ  ಈ ಸೈನಿಕನನ್ನು ನೆನಪು ಮಾಡಿಕೊಳ್ಳದಿದ್ದರೇ ಹೇಗೆ
ಕ್ಯಾಪ್ಟನ್ ವಿಕ್ರಮ್ ಬಾತ್ರಾ

ವಿಶೇಷ ವರದಿ : ಇವತ್ತು ನಾವು ನಮ್ಮ ಮನೆಯಲ್ಲಿ ನೆಮ್ಮದಿಯಾಗಿ ನಿದ್ದೆ ಮಾಡಲು ಕಾರಣ, ದೇಶದ ಗಡಿಯಲ್ಲಿ ನಿದ್ದೆ ಇಲ್ಲದೆ. ಹಸಿವಿನ ಪರಿವೆ ಇಲ್ಲದೆ ಗಡಿ ಕಾಯುತ್ತಿರುವ ಸೈನಿಕರೇ. ನಮ್ಮ ನಾಳೆಗಾಗಿ ತಮ್ಮ ಪ್ರಾಣ ಕೊಟ್ಟು ನಮ್ಮನ್ನು ರಕ್ಷಣೆ ಮಾಡಿದ ಅ ಮಹಾನ್ ಸೈನಿಕರಿಗೆ ನಾವು ಎಷ್ಟೆ ನೆನಪು ಮಾಡಿಕೊಂಡರು ಕಡಿಮೆ ಬಿಡಿ.

ವೈರಿಗಳ ಕಾದಾಟದಲ್ಲಿ ಕಣ್ಮುಚ್ಚುವ ಮುನ್ನ ಆ ಸೈನಿಕ ಮನಸ್ಸಿಗೆ ಬರುವುದು ತನ್ನ ಮನೆ, ಮಡದಿ. ಮಕ್ಕಳು. ತನ್ನ ಅಪ್ಪ. ಅಮ್ಮ, ಕುಟುಂಬವಲ್ಲ. ಸಾವಿನ ಕೊನೆ ಘಳಿಗೆಯಲ್ಲಿ ನೆನೆಯುವುದು ಜನ್ಮಕೊಟ್ಟ ಭಾರತ ದೇಶದ ಭೂಮಿಯನ್ನು ಕಾಪಾಡಿದೆ ಎನ್ನುವ ಕೊನೆ ಹೆಮ್ಮೆಯೊಂದಿಗೆ. ಅಂತಹ ಸಾವಿರಾರು ಸೈನಿಕರು ನಮ್ಮ ಮುಂದೆ ಇದ್ದಾರೆ ಅವರಲ್ಲಿ ಕೆಲವು ಮಂದಿ ಹೀರೋಗಳ ಪರಿಚಯ ಇಲ್ಲಿದೆ ಓದಿ. ಕ್ಯಾಪ್ಟನ್ ವಿಕ್ರಮ್ ಬಾತ್ರಾ ಹುಟ್ಟಿದ್ದು ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರು ಸೆಪ್ಟೆಂಬರ್ 9.1974ಲ್ಲಿ ಅವಳಿಗಳಾದ ವಿಕ್ರಮ್ ಮತ್ತು ವಿಶಾಲ್ ಜನಿಸಿದರು.

ಅಪ್ಪ ಜಿ.ಎಲ್. ಬಾತ್ರಾ ಚಂಡೀಗಢ ಸಮೀಪದ ಪಾಲಂಪುರದ ಶಾಲೆಯೊಂದರ ಹೆಡ್ ಮಾಸ್ಟರ್. ಅಮ್ಮ ಜೈಕಮಲ್ ಶಿಕ್ಷಕಿ. ಮಧ್ಯಮ ವರ್ಗದ ಕುಟುಂಬ ಅದು. ಕಾರ್ಗಿಲ್ ಯುದದ್ದ ಹಿರೋಗಳಲ್ಲಿ ಒಬ್ಬರು. ಇವರನ್ನು ಶೇರ್‌ ಷಾ ಎಂದು ಕೂಡ ಕರೆಯುತ್ತಾರೆ.

ಕ್ಯಾಪ್ಟನ್ ವಿಕ್ರಮ್ ಬಾತ್ರಾ 13ಜಮ್ಮು ಹಾಗೂ ಕಾಶ್ಮೀರದ ರೈಫಲ್‌ ತುಕಡಿಯಲ್ಲಿ ಕೆಲಸ ಮಾಡುತ್ತಿದ್ದರು. ಕ್ಯಾಪ್ಟನ್ ವಿಕ್ರಮ್ ಬಾತ್ರಾ ಆಗಷ್ಟೆ ಸೇನೆಗೆ ಸೇರಿ 18 ತಿಂಗಳು ಕಳೆದಿತ್ತು. ರಜೆ ಹಾಕಿ ತನ್ನ ಅಪ್ಪ ಅಮ್ಮನ್ನು ನೋಡಲು ಊರಿಗೆ ಬಂದಿದ್ದರು. ಅದೇ ಸಮಯದಕ್ಕೆ ಕಾಶ್ಮೀರದಲ್ಲಿ ಕಾರ್ಗಿಲ್ ಯುದ್ದ ಶುರವಾಗಿತ್ತು,  ತನ್ನ ಊರಿನ ಹೋಟೆಲ್‌ವೊಂದಕ್ಕೆ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಬಂದ ಸಮಯದಲ್ಲಿ ಪರಿಚಿತ ವ್ಯಕ್ತಿಯೊಬ್ಬ ಯುದ್ಧ ಪ್ರಾರಂಭವಾಗಿದೆ.

ಕಾರ್ಗಿಲ್‌ ವಿಜಯ್‌ ದಿವಸ : ಈ ಸೈನಿಕನನ್ನು ನೆನಪು ಮಾಡಿಕೊಳ್ಳದಿದ್ದರೇ ಹೇಗೆ?
ಕಾರ್ಗಿಲ್‌ ವಿಜಯ್‌ ದಿವಸ : ಈ ಸೈನಿಕನನ್ನು ನೆನಪು ಮಾಡಿಕೊಳ್ಳದಿದ್ದರೇ ಹೇಗೆ?

ಯಾರಿಗೆ ಗೊತ್ತು…. ಯಾವ ಕ್ಷಣದಲ್ಲಿ ಬೇಕಾದರೂ ನಿನಗೆ ಕರೆ ಬರಬಹುದು. ಎಚ್ಚರಿಕೆಯಿಂದಿರು….’ ಎಂದು ಕಿವಿಮಾತು ಹೇಳಿ ಬಿಟ್ಟರು
ಅಲ್ಲಿ ತನಕ ಸಮಾಧಾನವಾಗಿ ಕೇಳಿಸಿಕೊಳ್ಳುತ್ತಿದ್ದ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಆ ವ್ಯಕ್ತಿಗೆ ಹೇಳಿದ್ದು ಏನು ಗೊತ್ತಾ?‘ತಲೆಕೆಡಿಸಿಕೊಳ್ಳಬೇಡಿ. ಒಂದೋ ಗೆದ್ದು ತ್ರಿವರ್ಣ ಧ್ವಜವನ್ನು ಹಾರಿಸಿ ಬರುತ್ತೇನೆ, ಇಲ್ಲವೇ ಅದೇ ಧ್ವಜದಲ್ಲಿ ಸುತ್ತಿರುವ ನನ್ನ ಹೆಣ ಬರುತ್ತೆ ಅಂದಿದ್ದ!!

ಬಹುಶಃ ಆ ವ್ಯಕ್ತಿಗೆ ತಿಳಿದಿರಲಿಲ್ಲ, ತಾನು ವಿಕ್ರಮ್ ಜತೆ ಕಡೆ ಬಾರಿ ಮಾತನಾಡುತ್ತಿದ್ದೇನೆ ಎಂದು. ಕಾರ್ಗಿಲ್ ಸೇನೆಗೆ ಸೇರಿಕೊಳ್ಳುವಂತೆ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರಿಗೆ ಜೂನ್‌ 1 ರಂದು ಅದೇಶ ಬಂದಿತ್ತು. ದೇಶ ಸೇವೆಗೆಗಾಗಿ ತನ್ನ ಮಗನನ್ನು ತಂದೆ ತಾಯಿ, ಸ್ನೇಹಿತರು. ಕಳುಹಿಕೊಟ್ಟರು.

ಇತ್ತ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಕಾರ್ಗಿಲ್‌ ಯುದ್ದದಲ್ಲಿ ಸೇವೆ ಸಲ್ಲಿಸುವ ಸಮಯದಲ್ಲಿ ಪಾಕ್‌ ನ ಬಾಡಿಗೆ ಬಂಟರು ಆಟಗಳು ಮೀತಿ ಮೀರಿ ಹೋಗಿದ್ದವು. 5140 ಅಡಿ ಎತ್ತರದ ಶಿಖರವನ್ನು ನಮ್ಮ ಸೈನ್ಯ ವಶಪಡಿಸಿಕೊಳ್ಳಲೇ ಬೇಕಾಗಿತ್ತು. ಇದರ ಸಂಪೂರ್ಣ ಹೊಣೆಯನ್ನು ನೀಡಿದ್ದು ಕ್ಯಾಪ್ಟನ್ ವಿಕ್ರಮ್ ಬಾತ್ರಾ ಹಾಗೂ ಕ್ಯಾಪ್ಟನ್ ಸಂಜೀವ್ ಜಾಮ್ವಾಲ್‌ಗೆ. ಕೊಟ್ಟ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುವದರಲ್ಲಿ ಇವರಿಬರದ್ದು ಎತ್ತಿದ್ದ ಕೈ. ಕಡಿದಾದ ಶಿಖರವನ್ನು ಏರಿ ವೈರಿಗಳನ್ನು ಹಿಮ್ಮೆಟ್ಟಿಸಿ ತಾಯ್ನನೆಲದಲ್ಲಿ ಅಡಗಿ ಕುಳಿತ್ತಿದ್ದ ಪಾಕ್‌ ಬಾಡಿಗೆ ಬಂಟರನ್ನು ಹೆಣವಾಗಿಸಿ ಬಿಟ್ಟರು.
ಕ್ಯಾಪ್ಟನ್ ವಿಕ್ರಮ್ ಬಾತ್ರಾ ಹಾಗೂ ಅವರ ಟೀಮ್‌ನ ಈ ಸಾಹಕ್ಕೆ ಇಡೀ ದೇಶವೇ ಅವತ್ತು ಎದ್ದು ಸಲಾಂ ಹೇಳಿತ್ತು.
ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ಕೆಲಸ ಅಲ್ಲಿಗೆ ಮುಗಿಯಲಿಲ್ಲ ಅವರಿಗೆ ಮತ್ತೊಂದು ಮಹತ್ತರವಾದ ಕೆಲಸವನ್ನು ಸೈನ್ಯದಾ ಹಿರಿಯ ಅಧಿಕಾರಿಗಳು 16 ಸಾವಿರ ಅಡಿ ಎತ್ತರದಲ್ಲಿರುವ 4875 ಶಿಖರವನ್ನು ಜಯಿಸುವ ಜವಾಬ್ದಾರಿ ವಿಕ್ರಮ್‌ನ ಹೆಗಲೇರಿತ್ತು. ಮಂಜು ಮುಸುಕಿರುವ ವಾತಾವರಣದಲ್ಲಿ 80 ಡಿಗ್ರಿ ಕಡಿದಾದ ಶಿಖರವನ್ನು ಏರುವುದು ಸಾಮಾನ್ಯ ಮಾತಾಗಿರಲಿಲ್ಲ.ಜುಲೈ 8ರ ರಾತ್ರಿ ವಿಕ್ರಮ್ ಮತ್ತು ಮತ್ತೊಬ್ಬ ಯುವ ಸೇನಾಧಿಕಾರಿ ಅನೂಜ್ ನಯ್ಯರ್ ಶತ್ರುಗಳ ಮೇಲೆ ಪ್ರತಿ ದಾಳಿ ಆರಂಭಿಸಿದರು. ಜುಲೈ 8ರ ರಾತ್ರಿ ವಿಕ್ರಮ್ ಮತ್ತು ಮತ್ತೊಬ್ಬ ಯುವ ಸೇನಾಧಿಕಾರಿ ಅನೂಜ್ ನಯ್ಯರ್ ಶತ್ರುಗಳ ಮೇಲೆ ಪ್ರತಿ ದಾಳಿ ಆರಂಭಿಸಿದರು.

ನಿಮಗೆ ಇಲ್ಲಿ ಇನ್ನೊಂದು ವಿಷಯವನ್ನು ಹೇಳಲೇ ಬೇಕು 4875 ಪಾಯಿಂಟ್‌ ಭಾರತ ಸೈನಿಕರ ಪ್ರತಿಯೊಂದು ಚಲನವಲನಗಳು ತಿಳಿಯುತ್ತಿತ್ತು. ಇಲ್ಲಿ ಅವಿತುಕುಳಿತ್ತಿದ್ದ ಪಾಕ್‌ ಸೈನಿಕರನ್ನು ಹೊಡೆದು ಹೊಡಿಸ ಬೇಕು ಎಂದು ವಿಕ್ರಮ್ ಹಾಗೂ ಅವರ ತಂಡ ಅವರು ಹಾಗೂ ಅವರ ಸಂಗಡಿಗರು ಕಾರ್ಯಚರಣೆಯುದ್ದಕ್ಕೂ ದಾರಿಯಲ್ಲಿ ಸಿಕ್ಕ ಶತ್ರುಗಳ ಬಂಕರ್‌ಗಳನ್ನು ನಾಶಪಡಿಸುತ್ತ ಸಾಗಿದರು.

ಅಂತಿಮ ವಿಜಯ ಇನ್ನೇನು ಬಂತು ಎನ್ನುವಷ್ಟರಲ್ಲಿ ಶತ್ರುಗಳು ನಡೆಸಿದ ಸ್ಫೋಟದಲ್ಲಿ ಕಿರಿಯ ಅಧಿಕಾರಿಯೊಬ್ಬನ ಕಾಲುಗಳಿಗೆ ತೀವ್ರ ಗಾಯಗಳಾದವು. ಆತನನ್ನು ಬಂಕರ್‌ಗೆ ಎತ್ತಿಕೊಂಡು ಬರುವೆ ಎಂದು ಸನಿಹದಲ್ಲೇ ಇದ್ದ ಸುಬೇದಾರ್ ಹೇಳಿದರೂ ವಿಕ್ರಮ್ ಕೇಳಲಿಲ್ಲ. ‘ನಿನಗೆ ಮಕ್ಕಳಿದ್ದಾರೆ, ದೂರ ಸರಿ’ ಎಂದು ತಾನೇ ಹೊರ ನೆಗೆದ. ಶತ್ರುವಿನ ಗುಂಡು ಎದೆಯನ್ನೇ ಹೊಕ್ಕಿತು! ಇನ್ನೊಂದು ಗುಂಡು ಸೊಂಟವನ್ನು ಸೀಳಿತು. ಆದರೂ ನೆಲಕ್ಕುರುಳುವ ಮುನ್ನ ಬಾತ್ರಾ ಬಂದೂಕು ಐವರು ಭಯೋತ್ಪಾದಕರನ್ನು ಕೊಂದಿತ್ತು. ಬೆಳಗಾಗುವಷ್ಟರಲ್ಲಿ 4875ಶಿಖರವೇನೋ ಕೈವಶವಾಯಿತು.

ಆದರೆ ಶೇರ್‌ ಸಿಂಗ್‌ ತಾಯ್ನಡನ್ನು ಕಾಪಾಡಿದ ಖುಷಿಯಲ್ಲಿ ಅಮ್ಮನ ಮಡಿಲಲ್ಲಿ ಮಗು ಮಲಗಿ ನಿದ್ದೆ ಮಾಡುವಂತೆ ಮಲಗಿ ಹುತಾತ್ಮನಾಗಿ ಹೋಗಿದ್ದರು. ಆತ್ತ ನಿನ್ನ ಮದ್ವೆಯಾಗುವೆ ಎಂದು ಹೇಳಿ ಬಂದಿದ್ದ ಪ್ರೇಯಸಿ ಮದುವೆಯಾಗದೇ, ವಿಧವೆಯಾಗಿ ಹೋಗಿದ್ದಳು. ಆತನ ಪ್ರೇಯಸಿ ಇವತ್ತಿಗೂ ಮದ್ವೆಯಾಗದೇ  ಹಾಗೇ ಆವರ ನೆನಪಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಕಾರ್ಗಿಲ್ ಯುದ್ದ ಅಭಿಷೇಕ್‌ ಬಚ್ಚನ್‌ ಅಭಿನಯದಲ್ಲಿ ಸಿನಿಮಾವಾಗಿ ಬಂದು ಹೋಗಿ ಬಂದು ಹೋಗಿದೆ ಆದರೆ ವಿಕ್ರಮ್‌ ಬಾತ್ರಾ ನಮ್ಮಂತಹ ಅದೇಷ್ಟೋ ಕೋಟ್ಯಾಂತರ ಯುವಕರಿಗೆ ಅದರ್ಶವಾಗಿ ನಮ್ಮ ಮುಂದೆ ನಿಂತಿದ್ದಾರೆ.

ಕ್ಯಾಪ್ಟನ್ ವಿಕ್ರಮ್ ಬಾತ್ರಾ ಸತ್ತಿಲ್ಲ, ನಮ್ಮ ನಿಮ್ಮ ನಡುವೆ ಇದ್ದಾರೆ. ಭಾರತ ಮಾತೆಯ ನೆಲವನ್ನು ವೈರಿಗಳಿಂದ ಕಾಪಾಡಲು ಹಗಲು ಇರುಳು ನಮ್ಮ ದೇಶವನ್ನು ಕಾಯುತ್ತ ಈ ಭೂಮಿ ಇರುವ ತನಕ.

ಅಂಕಣಗಳು ಇನ್ನಷ್ಟು

ಪ್ರಮುಖ ಸುದ್ದಿಗಳು