Oyorooms IN

Monday, 20th February, 2017 4:18 AM

BREAKING NEWS

ಕ್ರೀಡೆ

ಗೃಹಸಚಿವ ಪರಮೇಶ್ವರ್ ವಿರುದ್ಧ ಕಿಡಿಕಾರಿದ ವಿರಾಟ್ ಕೊಹ್ಲಿ

ನ್ಯೂಸ್ ಡೆಸ್ಕ್: ಆಕೆ ಜೀವನ,, ಆಕೆ ಇಷ್ಟ,, ಆಕೆ ನಿರ್ಣಯ,, ಆಕೆಯ ಇಷ್ಟ,, ಆಕೆಯ ಇಷ್ಟ, ಸಿಕ್ಕಿದರು ಎಂದು ತಮ್ಮ ಇಷ್ಟ ಬಂತು ಅಂತ ಪ್ರವರ್ತಿಸಿದರೆ ಹೇಗೆ? ಹಾಗೆ ಪ್ರವರ್ತಿಸುವವರನ್ನು ಮನಷ್ಯರು ಎಂದು ಹೇಗೆ ಅನ್ನೋದು? ಅಂತ ಡ್ಯಾಶಿಂಗ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಬೆಂಗಳೂರು ಕೀಚಕ ಪರ್ವದ ಬಗ್ಗೆ ಖಂಡನೆಯನ್ನು ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಘಟನೆ ಬಗ್ಗೆ ಲವ್ ಬರ್ಡ್ಸ್ ಪ್ರತ್ಯೇಕವಾಗಿ ಪ್ರತಿಕ್ರಿಯಿಸಿದ್ದಾರೆ, ಬೆಂಗಳೂರಿನಲ್ಲಿ ಜರುಗಿರುವುದು ನಿಜವಾಗಿ ದಾರುಣವಾದ ವಿಚಾರ, ನಡೆಯುತ್ತಿರುವುದನ್ನು ನೋಡಿದರು ಸುಮ್ಮನಿದ್ದ ಹೇಡಿಗಳನ್ನು ಏನನ್ನಬೇಕು,, ಅಂತಹವರನ್ನು ಮನುಷ್ಯರು ಅನ್ನಬಹುದಾ ಎಂದು ಕೊಹ್ಲಿ ಆವೇಶಕ್ಕೆ ಒಳಗಾಗಿ ಪ್ರಶ್ನಿಸಿದ್ದಾರೆ.

ಅಂತಹವರನ್ನು ಹಾಗೆ ಅನ್ನಬಾರದು ಇಂತಹ ಕೃತ್ಯ ತಮ್ಮ ಕುಟುಂಬಸ್ಥರಿಗೆ ಮಾಡಿದರೆ ಸುಮ್ಮನೆ ಇರ್ತೀವಾ, ಸಹಾಯ ಮಾಡೋದಿಲ್ವಾ? ನಮ್ಮ ಬಳಿಗೆ ಬರೋವರೆಗೆ ಬಾಯಿ ಬಿಡದಿದ್ದರೆ ಹೇಗೆ? ಪ್ರಶ್ನಿಸುವವರು, ತಡೆಯೋರು ಇಲ್ಲದೇ ಇರುವುದಕ್ಕೆ ಇಂತಹ ಘಟನೆಗಳು ನಡೆಯುತ್ತಲೇ ಇವೆ ಎಂದು ಕೊಹ್ಲಿ ವ್ಯಾಖ್ಯಾನಿಸಿದ್ದು, ಆಕೆಯ ಬಟ್ಟೆ, ಆಕೆಯ ಇಷ್ಟ, ಕಸಿದುಕೊಳ್ಳುವ ಯಾರಿಗೂ ಇಲ್ಲ.

ಅಧಿಕಾರದಲ್ಲಿ ಇರುವವರು, ಅದನ್ನು ಸಮರ್ಥಿಸಿಕೊಳ್ಳುತ್ತಿರುವುದು ಹೇಯ ಕೃತ್ಯ, ಇಂತಹ ಸಮಾಜದಲ್ಲಿ ಇರುವುದಕ್ಕೆ ನನಗೆ  ನಾಚಿಕೆಯಾಗುತ್ತಿದೆ ಎಂದು ಕೊಹ್ಲಿ ಟ್ಟೀಟರ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ, ನಮ್ಮ ಆಲೋಚನೆ ಬದಲಾಗಬೇಕಿದೆ ಎಂದು ಕೊಹ್ಲಿ ಹೇಳಿದ್ದು, ನಟಿ ಅನುಷ್ಕಾ ಶರ್ಮಾ ಸಹ ಬೆಂಗಳೂರು ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಗುಂಪಿನಲ್ಲಿ ಇರುವ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದಾರೆ, ಸುತ್ತ ಇರುವವರು ನೋಡಿ ಸುಮ್ಮನಾಗುತ್ತಾರೆ, ಮಾನವತ್ವ ಇಲ್ಲದ ಮನುಷ್ಯರು ಬಟ್ಟೆ ಬಗ್ಗೆ, ಟೈಂ ಬಗ್ಗೆ ಮಾತನಾಡುತ್ತಾರೆ. ಅವತ್ತು ಅಲ್ಲಿದ್ದವರೆ ಅಲ್ಲ, ಸಮಾಜ,, ಆ ಸಮಾಜದಲ್ಲಿರುವ ನಾವೆಲ್ಲರು, ನಮ್ಮ ಹೆಣ್ಣುಮಕ್ಕಳ ಗೌರವ ಮರ್ಯಾದೆ ಕಾಪಾಡಲು ವಿಫಲವಾಗಿದ್ದೇವೆ ಎನ್ನುವುದು ಸತ್ಯ ಎಂದು ಅನುಷ್ಕಾ ಟ್ಟೀಟ್ ಮಾಡಿದ್ದಾರೆ, ಮಹಿಳೆಯರನ್ನು ಗೌರವಿಸುವುದು ಮಕ್ಕಳಿಗೆ ಮನೆಯಿಂದಲೇ ಕಲಿಸಬೇಕಿದೆ, ಗಂಡ್ಮಕ್ಕಳು ಕಿರಾತಕರಾಗದಂತೆ ನೋಡಿಕೊಳ್ಳಿ, ಆ ಮೂಲಕ ಹೆಣ್ಣುಮಕ್ಕಳನ್ನು ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ.

English summary:  virat kohli condemns bengaluru molestation case watch video

ಕ್ರೀಡೆ ಇನ್ನಷ್ಟು

ಪ್ರಮುಖ ಸುದ್ದಿಗಳು

ಕಾಂಗ್ರೆಸ್, ಬಿಜೆಪಿ ಕಪ್ಪ ಕಾಣಿಕೆ ನೀಡುವುದು ಹೊಸದೇನಲ್ಲ

ತುಮಕೂರು: ಕಾಂಗ್ರೆಸ್,ಬಿಜಿಪಿ ಪಕ್ಷಗಳು ಹೈಕಮಾಂಡ್‌ಗೆ ಕಪ್ಪಾ...


ಅಶ್ಲೀಲ ಚಿತ್ರ ನೋಡುವ ಗಂಡನನ್ನು ಕಾಪಾಡಿ

ಮುಂಬೈ:  ಮಧ್ಯರಾತ್ರಿಯಲ್ಲೂ ಎದ್ದು ಕೂತು...


ಬಿಜೆಪಿಗೆ ತಾಕತ್ ಇಲ್ಲ: ಡಾ.ಜಿ.ಪರಮೇಶ್ವರ್

ಕಲಬುರಗಿ :  ಮುಂಬರುವ ಚುನಾವಣೆಯನ್ನು...