Oyorooms IN

Friday, 26th May, 2017 4:13 AM

BREAKING NEWS

ಜಿಲ್ಲಾ ಸುದ್ದಿಗಳು

ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರ ವಸತಿ ನಿಲಯಗಳ ಭೇಟಿ ಪರಿಶೀಲನೆ ಅವ್ಯವಸ್ಥೆ ಕಂಡು ಕೆಂಡಾಮಂಡಲ

hostel visit

ಯಾದಗಿರಿ: ನಗರದ ವಿವಿಧ ಅಲ್ಪಸಂಖ್ಯಾತರ ಸಂಸ್ಥ್ತೆ ಹಾಗೂ ವಸತಿ ನಿಲಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾದ  ಬಲ್ಖೀಸ್ ಬಾನು ಅವ್ಯವಸ್ಥೆ ಕಂಡು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ನಗರ ಸಭೆ ಕಚೇರಿ ಬಳಿ ಇರುವ ಉರ್ದು ಶಾಲೆಗೆ ದಿಢೀರ್ ಭೇಟಿ ನೀಡಿದ್ದರಿಂದ ಅಲ್ಲಿದ್ದ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ಕಕ್ಕಾಬಿಕ್ಕಿಯಾದರು. 100 ವರ್ಷದ ಹಳೆಯ ಕಟ್ಟಡದಲ್ಲಿ ಅವ್ಯವಸ್ಥೆಯಿಂದ ಕೂಡಿರುವ ಕೊಠಡಿಯಲ್ಲಿ ಮಕ್ಕಳನ್ನು ನೆಲದ ಮೇಲೆ ಕುಳ್ಳಿರಿಸಿ ಬೋಧಿಸುತ್ತಿರುವುದನ್ನು ಕಂಡು ವ್ಯಘ್ರರಾದರು.

ಹೊಸ ಕಟ್ಟಡ ಕಟ್ಟಿದ್ದರೂ ಅದರಲ್ಲಿ ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಕಚೇರಿ ನಡೆಸುತ್ತಿರುವುದನ್ನು ಕಂಡು ಮತ್ತಷ್ಟು ಸಿಡಿಮಿಡಿಗೊಂಡರು. ಈ ಸಂದರ್ಭದಲ್ಲಿ ತಮ್ಮ ಸಮ್ಮುಖದಲ್ಲಿ ಹಳೆ ಕಟ್ಟಡದಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಟ್ಟಡಕ್ಕೆ ಮಕ್ಕಳನ್ನು ಸ್ಥಳಾಂತರಿಸಿದರು. 24 ಗಂಟೆಗಳಲ್ಲಿ ಕಚೇರಿ ಖಾಲಿ ಮಾಡುವಂತೆ ಕ್ಷೇತ್ರಶಿಕ್ಷಣಾಧಿಕಾರಿ ಕೆ. ಪ್ರಭುಗೆ ತಾಕೀತು ಮಾಡಿದರು.

ಶಾಲಾ ಆವರಣದಲ್ಲಿ ನೀರು ನಿಂತು ಮಕ್ಕಳು ಓಡಾಡದ ಸ್ಥಿತಿ ಉಂಟಾಗಿದ್ದು, ಸ್ಥಳಕ್ಕೆ ನಗರ ಸಭೆ ಆಯುಕ್ತರಾದ ರಮೇಶ ನಾಯ್ಕ ಕರೆಸಿದ ಬಲ್ಖೀಸ್ ಬಾನು ಅವರು, ನಾಳೆ ಬೆಳಿಗ್ಗೆಯೊಳಗೆ ಮಣ್ಣು ತುಂಬಿ ಸಮತಟ್ಟುಗೊಳಿಸಬೇಕೆಂದು ಸೂಚಿಸಿದರು. ಬಳಿಕ ನಗರಸಭೆಯ ಪಕ್ಕದಲ್ಲಿರುವ ಉರ್ದು ಪ್ರೌಢಶಾಲೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಬಾಲಕಿಯರಿಗೆ ಪ್ರತ್ಯೇಕ ಉರ್ದು ಮಾಧ್ಯಮ ಶಾಲೆ ತೆರೆಯಬೇಕೆಂಬ ಜನರ ಮನವಿಗೆ ಸ್ಪಂದಿಸುವ ಭರವಸೆ ನೀಡಿದರು.

ಹೊರವಲಯದಲ್ಲಿರುವ ಕೇಂದ್ರ ಪುರಸ್ಕೃತ ಯೋಜನೆಯ ಆದರ್ಶ ವಿದ್ಯಾಲಯಕ್ಕೆ ಭೇಟಿ ನೀಡಿ ಅಲ್ಪ ಸಂಖ್ಯಾತರ ಮಕ್ಕಳ ಹಾಜರಾತಿಯ ದಾಖಲಾತಿ ಪರಿಶೀಲಿಸಿದರು. 289 ಸೀಟುಗಳ ಪೈಕಿ ಅಲ್ಪಸಂಖ್ಯಾತರಿಗೆ ಕೇವಲ 4% ನೀಡುತ್ತಿರುವುದಕ್ಕೆ ಆಕ್ಷೇಪಿಸಿದ ಅವರು, ಸೀಟುಗಳ ಸಂಖ್ಯೆ ಹೆಚ್ಚಿಸಬೇಕೆಂದು ಹೇಳಿದರು.

ಶಾಲಾ ದಾಖಲಾತಿ ವೇಳೆ ನಡೆಸುವ ಪ್ರವೇಶ ಪರೀಕ್ಷೆಯನ್ನು ಕೇವಲ ಇಂಗ್ಲೀಷ್ ಮತ್ತು ಕನ್ನಡ ಭಾಷೆಯಲ್ಲಿ ನಡೆಸದೇ ಉರ್ದು ಭಾಷೆಯಲ್ಲೂ ನಡೆಸಬೇಕೆಂದು ಸೂಚಿಸಿದರು. ಈ ಮೂಲಕ ಅಲ್ಪಸಂಖ್ಯಾತ ಬಡಮಕ್ಕಳ ನೆರವಿಗೆ ಬರಬೇಕೆಂದು ಹೇಳಿದರು. ಈ ನಿಟ್ಟಿನಲ್ಲಿ ಸರ್ಕಾರಿ ನಿಯಮದಲ್ಲಿ ಬದಲಾವಣೆ ತರಲು ಯತ್ನಿಸಲಾಗುವುದೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಆಯೋಗದ ಸದಸ್ಯ ರಫೀ ಭಂಡಾರಿ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಮಾರುತಿ ಹುಜರಾತಿ ಮುಂತಾದವರು ಹಾಜರಿದ್ದರು.

ಜಿಲ್ಲಾ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...