Oyorooms IN

Saturday, 19th August, 2017 4:33 PM

BREAKING NEWS

ಪ್ರಮುಖ ಸುದ್ದಿಗಳು

ಮೊದಲ ರಾತ್ರಿ ಮಿಲನ ಮಹೋತ್ಸವ ಆಚರಿಸುವ ಮುನ್ನ

sex

ಪ್ರಥಮ ಬಾರಿಗೆ ಆ ಕುಚ್ಚಿನ ಜಡೆಯುಳ್ಳ ಲಂಗ ದಾವಣಿಯ ಸುಂದರಿಯನ್ನು ನೋಡಿದಾಗ, ಬಸ್ ಸ್ಟ್ಯಾಂಡಿನಲ್ಲಿ ನಿಂತಾಗ ಆಕೆ ಮೊದಲ ಬಾರಿಗೆ ಕುಡಿನೋಟ ನೋಡಿ ಮುಗುಳ್ನಕ್ಕಾಗ, ಬಸ್ ಇಳಿಯುವಾಗ ಅಕಸ್ಮಾತ್ ಆಕೆಯ ನವಿರಾದ ಬೆರಳು ತಾಗಿದಾಗ, ಪ್ರಪ್ರಥಮ ಬಾರಿಗೆ ಪ್ರೇಮದ ಭಾವ ಕಾರಂಜಿಯಂತೆ ಚಿಮ್ಮಿದಾಗ, ಫಸ್ಟ್ ಟೈಮ್ ಆಕೆಗೆ ಹೆದರಿ ಐ ಲವ್ ಯೂ ಎಂದು ಹೇಳಿದಾಗ ಆಗುವ ರೋಮಾಂಚನ ಇದೆಯಲ್ಲ ಅದನ್ನು ವರ್ಣಿಸಲು ಪದಗಳಲ್ಲಿ ಸಾಧ್ಯವೇ ಇಲ್ಲ. ಈ ಭಾವಕ್ಕೆ ಹುಡುಗ ಹುಡುಗಿ ಎಂಬ ಭೇದವಿಲ್ಲ, ಕಾಮಕ್ಕೆ ಯಾವುದೇ ಹಂಗಿಲ್ಲ.

ಸರಸದ ಸಮಯವನು ರಸಮಯವಾಗಿಸುವ ಸೀರೆ ಸರಸದ ಸಮಯವನು ಸಮಯವಾಗಿಸುವ ಸೀರೆ  ಕಾಮಾತುರರಿಗೆ ಕಂಡ ಕಂಡ ಕಡೆ ಸೆಕ್ಸ್ ಕಾಮನ್! ಕಾಮಾತುರರಿಗೆ ಕಂಡ ಕಂಡ ಕಡೆ ಸೆಕ್ಸ್ ಕಾಮನ್!
ಸಂಭೋಗವಾದ ಮೇಲೆ ಕೇಳ ಬಯಸುವ ಮಾತೇನು? ಸಂಭೋಗವಾದ ಮೇಲೆ ಕೇಳ ಬಯಸುವ ಮಾತೇನು?
ಎಲ್ಲಕ್ಕೂ ಒಂದು ಪ್ರಥಮ ಇದ್ದೇ ಇರುತ್ತದೆ. ಹಾಗೆಯೆ, ಕೈಹಿಡಿದು ಬಂದ ಸಂಗಾತಿಯನ್ನು ಮೊದಲ ಬಾರಿ ಮೊದಲ ರಾತ್ರಿ ಸಂಧಿಸುವಾಗ, ಅಥವಾ ಮನ ಮೆಚ್ಚಿದ ಸೀರೆಯುಡುವ ಹುಡುಗಿಯನ್ನು ಮೊದಲ ಬಾರಿ ಕೂಡುವಾಗ ಆಗುವ ರೋಮಾಂಚಕತೆ ಇದೆಯಲ್ಲ, ವಾವ್ ಏನಂತ ಹೇಳುವುದು. ಈ ಎಲ್ಲ ಪ್ರಥಮಗಳು ಅನೇಕ ಬಾರಿ ತಾನೇ ನಾಗಿಯೇ ಒಲಿದು ಬಂದರೂ, ಹಲ ಬಾರಿ ಕನಿಷ್ಠ ಮಟ್ಟಿಗಾದರೂ ಹುಡುಗಿಯನ್ನು ಎದುರಿಸಲು, ಮನವೊಲಿಸಿಕೊಳ್ಳಲು ಸಿದ್ಧತೆ ಬೇಕಾಗುತ್ತದೆ.  ಮುಂದೆ ಓದಿರಿ.

sex-1
ಒಂದು ರೋಸ್ ಕಾಣಿಕೆಯಾಗಿ ನೀಡಿರಿ : ಗುಲಾಬಿ ಹೂವಿಗಿಂತ ಅದ್ಭುತವಾದ ಸಸ್ತಾ ಉಡುಗೊರೆ ಇನ್ನೊಂದಿರಲಿಕ್ಕಿಲ್ಲ. ಹುಡುಗಿಯರಿಗೂ ಗುಲಾಬಿ ಕಂಡರೆ ಗಂಡನನ್ನು ಕೂಡ ಮರೆಯುವ ಮಮತೆ. ನಿರೀಕ್ಷೆಯೇ ಮಾಡದಂತೆ ಗುಲಾಬಿ ಹೂವನ್ನು ಕೈಯಲ್ಲಿ ಹಿಡಿದು ಸಂಗಾತಿಗೆ ಸೂಪರ್ ಸರ್‌ಪ್ರೈಸ್ ನೀಡಿರಿ. ಸ್ನಾನ ಮಾಡಿಬಂದು ಸೀರೆಯಲ್ಲಿ ಮಂಚದ ಮೇಲೆ ಕುಳಿತ ಸಂಗಾತಿಯ ಮೈಮೇಲೆಲ್ಲ ರೋಮಾಂಚನದ ಗುಳ್ಳೆಗಳೆದ್ದಿರುವಾಗ ಗುಲಾಬಿ ಪಕಳೆಗಳು ಆಕೆಯ ಗಲ್ಲ
ಚುಂಬಿಸಿದರೆ ಮೋಹದ ಉನ್ಮಾದವೆಬ್ಬಿಸದಿದ್ದರೆ ಕೇಳಿ.
ಆಡು ಆಟ ಆಡೂ, ಆಡೂ ಆಡೂ ಆಡಿ ನೋಡು : ಸಂಗಾತಿಯನ್ನು ಕಂಡೊಡನೆ ಕರಪಿಡಿದು, ನೇರವಾಗಿ ಮಂಚಕ್ಕೆಳೆದು ಸಂಭೋಗ ನಡೆಸುವುದಕ್ಕಿಂದ ಹೇಯವಾದ ಕೃತ್ಯ ಇನ್ನೊಂದಿಲ್ಲ. ಇನಿಯಳೊಡನೆ ಪ್ರೇಮದಾಟ ಆಡುವ ಮುಖಾಂತರ ಮೋಹದ ಪಾಶ ಎಸೆಯುವುದು ಅತಿ ಮುಖ್ಯ. ರಮಿಸಿರಿ, ಮುದ್ದಿಸಿರಿ, ನಸುಗೋಪಗೊಳ್ಳುವಂತೆ ಛೇಡಿಸಿರಿ, ಒಂದು ಪೋಲಿ ಜೋಕ್ ಹೇಳಿ ಕಚಗುಳಿಯಿಡಿ, ಮುಟ್ಟಾಡ ಆಡಿರಿ, ಚಿನ್ನಾಟ ಆಡಿರಿ. ಇಷ್ಟೆಲ್ಲ ಮಾಡಿದ ಮೇಲೆ ಮುಂದಿನ ಕೆಲಸ ಬಾಳೆ ಹಣ್ಣಿನ ಸಿಪ್ಪೆ ಸುಲಿದಂತೆಯೇ ಸಲೀಸು. ಏನಂತೀರಿ?

sex-11
ವಿಶ್ವಾಸವಿರಲಿ, ವಿಶ್ವಾಸ ಗಳಿಸಿಕೊಳ್ಳಿ : ಸಿಕ್ಸ್ ಪ್ಯಾಕ್ ಬಾಡಿ ಇದೆಯೆಂದು ಸಂಪೂರ್ಣ ಬೆತ್ತಲೆಯಾಗಿ ಹೆಂಡತಿ ಮುಂದೆ ನಿಲ್ಲುವುದು ಅಷ್ಟೊಂದು ಸುಲಭವಲ್ಲ. ಮೊದಲು ಹೆಂಡತಿಯ ವಿಶ್ವಾಸ ಗಳಿಸಿಕೊಳ್ಳುವುದು ತೀರ ಅಗತ್ಯ. ಇವ ದುಡುಕಲ್ಲ, ದಬ್ಬಾಳಿಕೆ ಮಾಡಲ್ಲ, ಬಲಾತ್ಕಾರ ಮಾಡಲ್ಲ, ಇಚ್ಛೆಗೆ ವಿರುದ್ಧವಾಗಿ ನಡೆದುಕೊಳ್ಳಲ್ಲ, ಮನಸ್ಸಿಗೆ
ನೋವಾಗುವ ಹಾಗೆ ನಡೆದುಕೊಳ್ಳಲ್ಲ ಎಂದು ಮನವರಿಕೆಯಾದಾಗಲೇ ಸಂಗಾತಿ ಕೂಡ ತನ್ನನ್ನು ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುತ್ತಾಳೆ. ಹಾಗಾಗಿ, ಮೈಮೇಲೆ ಬಟ್ಟೆ ಇದ್ದುಕೊಂಡೇ ಸಂಗಾತಿಯ ಸೆಳೆಯಲು ಮುಂದಡಿಯಿಡಿ.
ಹೆಚ್ಚಿನ ನಿರೀಕ್ಷೆ ಬೇಡ : ರೋಮಾನ್ಸ್ ಮಾಡುವಾಗ ಇರುವ ಮನಸ್ಥಿತಿಗೂ, ಸಂಭೋಗಿಸುವಾಗ ಇರುವ ಮನಸ್ಥಿತಿಗೂ ತುಂಬಾ ವ್ಯತ್ಯಾಸವಿದೆ. ಆಯಾ ಘಟ್ಟದಲ್ಲಿ ಸಂಗಾತಿಗೆ ಇಷ್ಟವಾಗುವ ಹಾಗೆ ಪರಿವರ್ತನಗೊಳ್ಳುವ ಜಾಣ್ಮೆ ಎಲ್ಲರಲ್ಲಿ ಇರಬೇಕು. ನಾನಿದ್ದ ಹಾಗೇ ಹೆಂಡತಿ ಇರಬೇಕು, ನನ್ನಷ್ಟೇ ಬಟ್ಟೆ ಆಕೆ ಧರಿಸಿರಬೇಕು, ನಾನು ಚುಂಬಿಸಿದಲ್ಲೇ ಆಕೆಯೂ
ಚುಂಬಿಸಬೇಕು, ನಾನು ಇಷ್ಟಪಟ್ಟಂತೆ ನಡೆದುಕೊಳ್ಳಬೇಕು ಎಂಬ ಅತಿಯಾದ ನಿರೀಕ್ಷೆ ಖಂಡಿತ ಬೇಡ. ಎಲ್ಲವೂ ಹಂತಹಂತವಾಗಿರಲಿ. ಪುಟ್ಟ ಪುಟ್ಟ ಅಲೆಗಳಲ್ಲಿ ಬರುವ ನೀರು ಕೊನೆಗೆ ಆಳ ಕಂಡಾಗ ಭೋರ್ಗರೆಯುವಂತೆ ಕ್ಲೈಮ್ಯಾಕ್ಸ್ ಇರಲಿ.  ಸರಸದ ಸಮಯವನು ರಸಮಯವಾಗಿಸುವ ಸೀರೆ ಸರಸದ ಸಮಯವನು ರಸಮಯವಾಗಿಸುವ ಸೀರೆ  ಕಾಮಾತುರರಿಗೆ ಕಂಡ ಕಂಡ ಕಡೆ ಸೆಕ್ಸ್ ಕಾಮನ್! ಕಾಮಾತುರರಿಗೆ ಕಂಡ ಕಂಡ ಕಡೆ ಸೆಕ್ಸ್ ಕಾಮನ್!
ಸಂಭೋಗವಾದ ಮೇಲೆ ಕೇಳ ಬಯಸುವ ಮಾತೇನು? ಸಂಭೋಗವಾದ ಮೇಲೆ ಕೇಳ ಬಯಸುವ ಮಾತೇನು?

frist

ತಮಾಷೆ ಮತ್ತು ಎಚ್ಚರಿಕೆ : ಬಿಗುವಾದ ಮನವನ್ನು ಸಡಿಲಿಸಲು ಆಗಾಗ ತಮಾಷೆ ಮಾಡುತ್ತಿರಿ. ಗೊತ್ತಿದ್ದರೂ ಗೊತ್ತಿಲ್ಲದಿದ್ದರೂ ಒಂದು ರೋಮಾಂಚಕ ಹಾಡು ಬಾಯಲ್ಲಿ ಗುನುಗುತ್ತಿರಲಿ. ಗಡಿಬಿಡಿ ಮಾಡಿದರೆ ಕೆಟ್ಟಿರಿ ಎಂದೇ ಅರ್ಥ. ಸಂಭೋಗಿಸುವಾಗಲೂ ತಾಳ್ಮೆಯಿರಲಿ. ಆಗಲೇ ಆನಂದದ ಉತ್ತುಂಗವೇರಲು ಸಾಧ್ಯ. ಮಕ್ಕಳಾಗುವುದು ಇಷ್ಟವಿಲ್ಲದಿದ್ದರೆ ಕಾಂಡೋಮ್ ಬಳಸುವುದನ್ನು ಮರೆಯದಿರಿ. ಯಾವುದೇ ಅಂಜಿಕೆ, ಮುಜುಗರ, ಅಹಂಕಾರ, ಬಿಗುಮಾನ ಇಲ್ಲದೆ ಮಿಲನ ಮಹೋತ್ಸವ ಮಹೋನ್ನತವಾಗಿರಲಿ, ಕಾಮಕೇಳಿ ಅದ್ಭುತವಾಗಿರಲಿ. ಸುಖವಾಗಿ ಬಾಳಿರಿ.

ಪ್ರಮುಖ ಸುದ್ದಿಗಳು ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...