Oyorooms IN

Monday, 24th July, 2017 10:04 PM

BREAKING NEWS

ಪ್ರಮುಖ ಸುದ್ದಿಗಳು

“ರೇಪಿಸ್ಟ್ ನಿಮ್ಮ ರೂಂಗೆ ಬಂದ್ರೆ ಏನ್ಮಾಡ್ತೀರಾ?” ವಿದ್ಯಾರ್ಥಿನಿಯರಿಗೆ ಎಂಎಲ್ ಎ ಪ್ರಶ್ನೆ

ಬಿಹಾರ್: ಅತ್ಯಾಚಾರದ ಬಗ್ಗೆ ಬಿಹಾರದ ಎಂಎಲ್ಎ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ, ಸ್ವಯಂ ಪೊಲೀಸ್ ಅವತಾರವೆತ್ತಿ ಇಂಟ್ರಾಗೇಷನ್ ಮಾಡಿರುವ ಜನಪ್ರತಿನಿಧಿ “ ಆ ಹುಡುಗಿ ಅತ್ಯಾಚಾರಕ್ಕೆ ಒಳಗಾದವಳು ಎಂದು ಹೇಗೆ ಹೇಳ್ತೀರಾ? ಆ ರಕ್ತ ಎಲ್ಲಿಂದ ಬಂತು ? ಎಂದು ಪ್ರಶ್ನಿಸಿ ಮುಜುಗರವನ್ನುಂಟು ಮಾಡಿದ್ದಾರೆ.

ಬಿಜೆಪಿ ಮಿತ್ರ ಪಕ್ಷ  ರಾಷ್ಟ್ರೀಯ ಲೋಕಸಮತಾ ಪಾರ್ಟಿ ಎಂಎಲ್ಎ ಲಲನ್ ಪಾಶ್ವಾನ್ ಇಂತಹ ವಿಕೃತ ಪ್ರಶ್ನೆಗಳನ್ನು ಕೇಳುವ ಮೂಲಕ ವಿದ್ಯಾರ್ಥಿನಿಯರಿಗೆ ಇಬ್ಬಂದಿ ವಾತಾವರಣವನ್ನು ಸೃಷ್ಟಿಸಿದ್ದಾರೆ. ಬಿಹಾರದ ವೈಶಾಲಿಯ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ 10ನೇ ತರಗತಿ ವಿದ್ಯಾರ್ಥಿನಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಳು, ಆಕೆ ಬಟ್ಟೆಯ ಮೇಲೆ ರಕ್ತದ ಕಲೆಗಳಿತ್ತು.

ಈ ಘಟನೆಯ ಹಿನ್ನೆಲೆಯಲ್ಲಿ ವಸತಿಶಾಲೆಗೆ ಬಂದ ಎಂಎಲ್ಎ ಪಾಶ್ವಾನ್ ಅವರೇ ಉಳಿದ ವಿದ್ಯಾರ್ಥಿಗಳನ್ನು ಪ್ರಶ್ನಿಸುತ್ತಾ ಇಂಟ್ರಾಗೇಷನ್ ಮಾಡಿದ್ದಾರೆ. ಅಸಭ್ಯಕರವಾಗಿ ಪ್ರಶ್ನೆಗಳನ್ನು ಕೇಳಿದ ಶಾಸಕರು “ನೀವು ವಿದ್ಯಾರ್ಥಿಗಳು,, ನಿಮ್ಮ ಉತ್ತರ ಸ್ಪಷ್ಟವಾಗಿರಬೇಕು,  ಯಾವಾಗಲಾದ್ರೂ ನಿಮ್ಮ ಮೇಲೆಯೇ ಇಂತಹ ಘಟನೆ ನಡೆಯಬಹುದು, ಏನು ನಡೆಯಿತು ಅನ್ನುವುದನ್ನು ಸ್ಪಷ್ಟವಾಗಿ ಹೇಳದೇ ಇದ್ದರೆ ಹೇಗೆ?

ರೇಪಿಸ್ಟ್ ನಿಮ್ಮ ರೂಂಗೆ ಬಂದರೆ ನೀವೇನು ಮಾಡ್ತೀರಾ?… ಅಂತ ವಿದ್ಯಾರ್ಥಿಗಳ ಮೇಲೆ ಪ್ರಶ್ನೆಗಳ ಸುರಿಮಳೆ ಮಾಡಿದ್ದಾರೆ,  ಸ್ವಯಂ ಡಿಟೆಕ್ಟಿವ್ ಅವತಾರವೆತ್ತಿದ್ದ ಶಾಸಕರು “ರೇಪಿಸ್ಟ್ ಕೆಲವು ಹುಡುಗಿಯರಿಗೆ ಗೊತ್ತಿರುವವರೇ ಆಗಿರಬಹುದು” ಅಂತ ವಿದ್ಯಾರ್ಥಿನಿಯರತ್ತ ಅನುಮಾನದಿಂದಲೇ ನೋಡಿದ್ದಾರೆ, ಅಲ್ಲಿಗೆ ಸುಮ್ಮನಾಗದ ಮಾನ್ಯ ಶಾಸಕರು ಶಿಕ್ಷಕರ ಕಡೆ ತಿರುಗಿ “ ನಿಮ್ಮಲ್ಲಿಯೇ ಕೆಲವರು ರೇಪಿಸ್ಟ್ ಗಳಿಗೆ ಸಹಾಯ ಮಾಡಿರಬಹುದು ಅಲ್ವೇ..? ಎಂದಿದ್ದಾರೆ.

ಈ ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ಬೆಳಕಿಗೆ ಬಂದಿದ್ದು ವೈರಲ್ ಆಗಿದೆ, ಹೊಸ ವರ್ಷದ ವೇಳೆ ಬೆಂಗಳೂರಿನ ನಡೆದ ಕೀಚಕ ಪರ್ವದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯ ಬಗ್ಗೆ ಶಾಸಕ ಪಾಶ್ವಾನ್ ವರ್ತನೆ ಚರ್ಚೆಗೆ ಕಾರಣವಾಗಿದೆ, ಆದರೆ ಎಂಎಲ್ಎ ಲಲನ್ ಪಾಶ್ವಾನ್ ತಾನು ಮಾಡಿದ್ದು ಸರಿ ಎಂದು ಸಮರ್ಥಿಸಿಕೊಂಡಿದ್ದಾರೆ, ನನ್ನ ಪ್ರಶ್ನೆಗಳ ಹಿಂದೆ ದುರುದ್ದೇಶವಿಲ್ಲ ಎಂದು ಹೇಳಿದ್ದಾರೆ.

English summary:  what if it happens you bihar mla asking the friend of a murdered student

ಪ್ರಮುಖ ಸುದ್ದಿಗಳು ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...