Oyorooms IN

Saturday, 19th August, 2017 4:38 PM

BREAKING NEWS

ಪ್ರಮುಖ ಸುದ್ದಿಗಳು

Special story: 500/1000 ನೋಟು ರದ್ದುಗೊಳಿಸಿದ್ದರಿಂದ ಹಿಂದಿನ ರಹಸ್ಯ…!!

modi_plan_

ಪ್ರಧಾನಿ ನರೇಂದ್ರ ಮೋದಿ ಅವರು 500/1000 ನೋಟುಗಳನ್ನು ರದ್ದುಗೊಳಿಸಿ ತೆಗೆದುಕೊಂಡಿರುವ ನಿರ್ಣಯ ಎಲ್ಲರನ್ನು ತಲೆಕೆಳಗಾಗುವಂತೆ ಮಾಡಿದೆ, ಮೋದಿ ಅವರ ನಿರ್ಣಯದ ಹಿಂದೆ ಮಹತ್ವವಾದ ಆಲೋಚನೆ ಇದ್ದು, ಇದು ಜನ ಸಾಮಾನ್ಯರಿಗೆ ಅರ್ಥವಾಗದೇ ಮೋದಿ ಅವರನ್ನು, ಸರ್ಕಾರವನ್ನು ತೆಗಳುತ್ತಿದ್ದೇವೆ,  ಬ್ಯಾಂಕ್  ಮುಂದೆ ಕ್ಯೂ ನಿಂತವರಿಗೆ ಗೊತ್ತಾಗುತ್ತದೆ ಕಷ್ಟ, ಅಂತೀರಾ, ಮೋದಿ ಅವರ ಆಲೋಚನೆ ಏನಂತ ಗೊತ್ತಾದ್ರೆ, ನಾವು ನಿಂತಿದ್ದು, ನಮ್ಮ ಒಳ್ಳೆಯದಕ್ಕಾಗಿ ಎಂದು ಅರ್ಥ ಮಾಡಿಕೊಳ್ಳುತ್ತೀರಿ.

ಇಷ್ಟಕ್ಕೂ ಮೋದಿ ಆಲೋಚನೆ ಏನು? ಅದರಿಂದ ನಮಗೆ ಆಗುವ ಲಾಭ ಏನು? ಆ ವಿಷಯವನ್ನು ತಿಳಿದುಕೊಳ್ಳುವ ಮುಂಚೆ ನಮ್ಮ ಹಣದ ಬಗ್ಗೆ ಒಂದಿಷ್ಟು ವಿಷಯಗಳನ್ನು ತಿಳಿದುಕೊಳ್ಳಬೇಕಿದೆ, ನಿಮಗೆ ಗೊತ್ತಿದೆ ಅಲ್ವಾ ಹಣವನ್ನು ಮುದ್ರಿಸುವುದು ಸರ್ಕಾರ ತಾನೆ, ಜನರಿಗೆ ಎಷ್ಟು ಬೇಕೋ ಅಷ್ಟು ಮುದ್ರಿಸಿ ನೀಡಬಹುದಲ್ಲವೇ? ಹೀಗೆ  ಮಾಡಿದರೆ ದೇಶದಲ್ಲಿ ಬಡವರೇ ಇರುವುದಿಲ್ಲ ಅಲ್ಲವೇ? ಹೀಗೆ ಮಾಡಿದ್ರೆ ದೇಶ ನಾಶ ಆಗೋದ್ರಲ್ಲಿ ಸಂದೇಹವಿಲ್ಲ.

ಇದಕ್ಕೆ ಕಾರಣವೂ ಇದೆ, ಹಣವನ್ನು ಮುದ್ರಿಸಬೇಕೆಂದರೆ ಕೆಲವು ನಿಯಮಗಳನ್ನು ಪಾಲಿಸಬೇಕಾಗಿದೆ, ನೀವು ನಮ್ಮ ನೋಟುಗಳನ್ನು ನೋಡೇ ಇರುತ್ತೀರಿ, ನಮ್ಮ ಆರ್ ಬಿಐ ಗರ್ವನರ್ ಸಹಿ ಬಳಿ ಒಂದು ಸಂದೇಶವಿದೆ, ಹಿಂದಿ ಹಾಗೂ ಆಂಗ್ಲದಲ್ಲಿ ಹೀಗಿದೆ “ I promise to pay the bearer the sum of one hundred rupees” ಈ ಸಂದೇಶದ ಅರ್ಥ ಏನು ಗೊತ್ತಾ ನಿಮಗೆ, ಒಂದು ವೇಳೆ ನಿಮಗೆ ನೂರು ರೂಪಾಯಿ ಬೇಕಿಲ್ಲವೆಂದುಕೊಂಡರೆ, ಆ ಹಣವನ್ನು ಭಾರತ ಸರ್ಕಾರಕ್ಕೆ ವಾಪಸ್ ನೀಡಿದರೆ, ಆ  ವೇಳೆ RBI ನಮಗೆ 100 ರೂಪಾಯಿ ಬೆಲೆಬಾಳುವಂತಹ ಬಂಗಾರವನ್ನು ನೀಡುತ್ತೇವೆ ಆರ್ ಬಿಐ ಗರ್ವನರ್ ನಮಗೆ ಪ್ರಮಾಣ ಮಾಡಿ ಮಾಡಿರುವ ಸಹಿ.

cash

ನಿಮ್ಮ ಬಳಿ 1 ರೂಪಾಯಿ ಇದ್ದರೂ, 100 ಕೋಟಿ ಇದ್ದರೂ, ಆ ಹಣ ನಿಮಗೆ ಅವಸರವಿಲ್ಲ ಎಂದುಕೊಂಡು ಸರ್ಕಾರಕ್ಕೆ ನೀಡಿ, ಆ ಹಣ ಕ್ಕೆ ಸರಿಯಾಗುವಂತಹ ಬಂಗಾರವನ್ನು ಪಡೆದುಕೊಳ್ಳಬಹುದು, ಈ ವಿಷಯವನ್ನೇಲ್ಲ ಯಾಕೆ ಹೇಳ್ತಾ ಇದ್ದಾರೆ ಅಂದ್ಕೋಂಡಿದ್ದೀರಾ ? ಇಲ್ಲೇ ಅಸಲಿ ವಿಷಯ ಇರುವುದು, ನಮ್ಮ ದೇಶದ ಆರ್ಥಿಕ ಪರಿಸ್ಥಿತಿ ನಮ್ಮ ಸರ್ಕಾರದ ಬಳಿ ಇರುವ ಬಂಗಾರದೊಂದಿಗೆ ಹೋಲಿಸುತ್ತಾರೆ, ಸರ್ಕಾರದ ಬಳಿ ಹೆಚ್ಚು ಬಂಗಾರ ಇದ್ದರೆ, ಅಷ್ಟು ಹಣವನ್ನು ಮುದ್ರಿಸಬಹುದು. ಯಾಕಂದ್ರೆ  ಯಾರಾದ್ರೂ ನಮಗೆ ಹಣ ಬೇಡ ಎಂದು, ಹಣವನ್ನು ತೆಗೆದುಕೊಳ್ಳಿ ಎಂದುಕೊಂಡರೆ ಸರ್ಕಾರದ ಬಳಿ ಹಣಕ್ಕೆ ಸರಿದೂಗುವಂತಹ ಚಿನ್ನ ಇರಬೇಕು ಅಲ್ವಾ,, ಈಗ ಅರ್ಥ ಆಗ್ತಾ ಇದೆಯಾ?

ಈ ಬಂಗಾರಕ್ಕೂ ಕಪ್ಪುಹಣಕ್ಕೆ ಏನು ಸಂಬಂಧ ಅಂದುಕೊಳ್ಳುತ್ತಾ ಇದ್ದೀರಾ?? ನಮ್ಮ ಸರ್ಕಾರ ಎಷ್ಟೋ ವರ್ಷಗಳಿಂದ ಹಣವನ್ನು ಮುದ್ರಿಸುತ್ತಿದೆ, ಬಂಗಾರದ ಬೆಲೆ ಹೆಚ್ಚಾದಂತೆ ಹಣವನ್ನು ಮುದ್ರಿಸುವುದು ಹೆಚ್ಚಾಗಿದೆ, ಆ ಹಣ ಬ್ಯಾಂಕ್ ಗಳ ಮೂಲಕ ಸಾಮಾನ್ಯ ಪ್ರಜೆಗಳಿಗೆ ಸೇರಿಕೊಳ್ಳುತ್ತದೆ, ಈ ಹಣ ಸಾಮಾನ್ಯರಿಗೆ ಉಪಯೋಗವಾಗದಂತೆ ಉದ್ಯಮಿಗಳ ತಿಜೋರಿ ಸೇರಿಕೊಂಡಿದೆ. ದೊಡ್ಡ ದೊಡ್ಡ ಉದ್ಯಮಿಗಳು ದೇಶದಲ್ಲಿರುವ ಇರುವ ಹಣವನ್ನು ಯಾವುದೋ ವಿಧದಲ್ಲಿ ಸಂಪಾದಿಸಿಕೊಂಡು, ಅದಕ್ಕೆ ಟ್ಯಾಕ್ಸ್ ಕಟ್ಟದೇ ಅಡಗಿಸಿ ಇಡುತ್ತಿದ್ದಾರೆ.

ಹೀಗೆ ಟ್ಯಾಕ್ಸ್ ಕಟ್ಟದೇ, ಬ್ಯಾಂಕ್ ಗೆ ಹಾಕದೇ ಹಣವನ್ನು ಅಡಗಿಸಿಡುವುದರಿಂದ ಯಾರಿಗೂ ಉಪಯೋಗವಾಗುವುದಿಲ್ಲ, ಅವರಷ್ಟಿಗೆ ಅವರು ಖರ್ಚು ಮಾಡದೇ ಇದ್ದರೆ, ಆ ಹಣಕ್ಕೂ ಕಾಗದಕ್ಕೆ ಯಾವುದೇ ವ್ಯತ್ಯಾಸ ಇಲ್ಲ, ಇಲ್ಲಿ ಇನ್ನೊಂದು ವಿಷಯ ತಿಳಿದುಕೊಳ್ಳಬೇಕಾಗಿದೆ, ಅದು ಏನಂದ್ರೆ, ಪ್ರತಿ ವರ್ಷ ನಮ್ಮ ಸರ್ಕಾರ ಬಜೆಟ್ ಅನ್ನು ಪಾರ್ಲಿಮೆಂಟ್ ನಲ್ಲಿ ಮಂಡಿಸುತ್ತದೆ, ಬಜೆಟ್ ನಲ್ಲಿ ಏನಿದೆ ಅಂದ್ರೆ ವರ್ಷಕ್ಕೆ ನಮ್ಮ ದೇಶದ ಆದಾಯ ಎಷ್ಟು? ಎಷ್ಟು ಖರ್ಚು ಮಾಡಬಹುದು? ಎಷ್ಟು ಸಾಲ ಮಾಡಬೇಕಿದೆ? ಮುಂದಿನ ವರ್ಷಕ್ಕೆ ನಮ್ಮ ಆದಾಯ ಎಷ್ಟಿರಬೇಕು? ಇಂತಹ ಲೆಕ್ಕಗಳು ಇರುತ್ತವೆ, ಕೆಲ ವರ್ಷಗಳಿಂದ ನಮ್ಮ ಬಜೆಟ್ ನೋಡಿದ್ರೆ ನಮ್ಮ ಆದಾಯಕ್ಕಿಂತ ಖರ್ಚೇ ಅಧಿಕ, ತಲೆಮಾರುಗಳಿಂದ ದೇಶದ ಪರಿಸ್ಥಿತಿ ಹೀಗೆಯೇ ಇದೆ. ಇದರರ್ಥ ನಮ್ಮ ದೇಶವನ್ನು ನಡೆ ಸೋದಕ್ಕೆ ಸಾಕಾಗುವಷ್ಟು ಹಣ ನಮ್ಮ ಬಳಿ ಇಲ್ಲ ಎಂದರ್ಥ, ಸಾಕಾಗುವಷ್ಟು ಹಣ ಇಲ್ಲದೇ ಇರುವುದರಿಂದ ಪ್ರತಿ ವರ್ಷ ವಿಶ್ವಬ್ಯಾಂಕ್  ಹಾಗೂ ಬೇರೆ ದೇಶಗಳ ಬಳಿ ಸಾಲ ಮಾಡಬೇಕಾಗಿದೆ.

curencey

ಹೀಗೆ ಹಣ ಇಲ್ಲದೇ ಇರುವುದನ್ನೆ ಆರ್ಥಿಕ ಅಭಾವ ಎನ್ನುತ್ತಾರೆ, ಪ್ರಧಾನಿ ಮೋದಿ ಈ ಆರ್ಥಿಕ ಅಭಾವವನ್ನು ತಗ್ಗಿಸುವುದಕ್ಕೆ ಅಧಿಕಾರಕ್ಕೆ ಬಂದಾಗಿನಿಂದಲೂ ಕಷ್ಟಪಡುತ್ತಿದ್ದಾರೆ, ದೇಶ-ವಿದೇಶವನ್ನು ತಿರುಗಿ ಭಾರತದಲ್ಲಿ ಉದ್ಯಮವನ್ನು ಸ್ಥಾಪಿಸುವಂತೆ ಕೋರು ತ್ತಿದ್ದಾರೆ, ಅಷ್ಟೇ ಅಲ್ಲ  ಆರ್ಥಿಕ ಸುಧಾರಣೆಗಳನ್ನು ಕೈಗೊಂಡು ನಮ್ಮ ದೇಶದಲ್ಲಿ ಉದ್ಯಮಗಳನ್ನು ಸ್ಥಾಪಿಸಲು ಅನುಕೂಲಕರವಾದ ಪರಿಸ್ಥಿತಿಯನ್ನು ನಿರ್ಮಿಸಿದ್ದಾರೆ, ಎಲ್ಲರಿಗೂ ಗೊತ್ತಿರುವ ರಹಸ್ಯ ಏನಂದ್ರೆ ನಮ್ಮ ದೇಶದವರ ಬಳಿ ಇರುವ ಕಪ್ಪುಹಣವನ್ನು ಹೊರಗೆ ತೆಗೆದರೆ ಬೇರೆ ದೇಶಗಳ ಮೇಲೆ ಆಧಾರ ಪಡುವುದು ತಪ್ಪುತ್ತದೆ, ಕಪ್ಪುಹಣವನ್ನು ಹೊರಗೆ ತೆಗೆಯಲು ಬ್ಯಾಂಕ್ ಗೆ ಹಣ ಹಾಕುವಂತೆ ಮಾಡುವುದೊಂದೇ ಮಾರ್ಗ, ಇದಕ್ಕಾಗಿ ಪ್ರಧಾನಿ ಮೋದಿ ಅವರು ಕಪ್ಪುಹಣ ಹೊಂದಿರುವವರಿಗೆ ಕೊನೆ ಅವಕಾಶವನ್ನು ನೀಡಿ, ಸೆಪ್ಟೆಂಬರ್ 30ರೊಳಗೆ ಲೆಕ್ಕದಲ್ಲಿ ಇಲ್ಲದ ಹಣಕ್ಕೆ ಟ್ಯಾಕ್ಸ್ ಕಟ್ಟಿ ಬ್ಲ್ಯಾಕ್ ಅನ್ನು ವೈಟ್ ಮಾಡಿಕೊಳ್ಳಿ ಎಂದರೆ ಮುಂದಕ್ಕೆ ಬಂದಿದ್ದು ಕಡಿಮೆ ಜನ.

ಬೇರೆ ದಾರಿ ಇಲ್ಲದೆ 500/1000 ನೋಟುಗಳನ್ನು ಬದಲಾಯಿಸಬೇಕೆಂದು ಆದೇಶಿಸಿದರು, ಆ ವಿಷಯ ನಮಗೂ ಗೊತ್ತಿದೆ ಅಂತೀರಾ ಅಲ್ವಾ? ಇಲ್ಲೆ ಇರುವುದು ಅಸಲಿ ಕಿಕ್ಕು ನೀಡೋ ಮೋದಿ ಪಂಚ್, ದಿನ ದಿನವೂ ಟಿವಿಯಲ್ಲಿ ನೋಡುತ್ತಿರುವಂತೆ, ಅಕೌಂಟ್ನಲ್ಲಿ 2,5 ಲಕ್ಷ ದಾಟಿದ್ರೆ ನಿಮ್ಮ ಕೆಲ್ಸ ಆಗಿ ಹೋದಂತೆ ಎಂದು ಸರ್ಕಾರ ಭಯಪಡಿಸುತ್ತಿದ್ದು, ಹೀಗೆ ಭಯಪಡಿಸಿದ್ರೆ ಬ್ಯಾಂಕ್ ಅಕೌಂಟ್ ಗೆ ಯಾರು ದುಡ್ಡು ಹಾಕ್ತಾರೆ ಅನ್ನುವ ಸಂದೇಹ ಬಳಷ್ಟು ಮಂದಿಗೆ ಬಂದೇ ಇರುತ್ತೇ? ಬ್ಯಾಂಕ್ ಗೆ ಹಾಕಿದ್ರೆ ಜೈಲಿಗೆ ಹಾಕ್ತಾರೆ ಅನ್ನುವುದರಿಂದಲೇ ಕಪ್ಪುಹಣ ಹೊಂದಿರುವವರು ಹಣವನ್ನು ಕಸದ ತೊಟ್ಟಿಗೆ, ಕಾಲುವೆಗೆ, ನದಿಗೆ, ಹಣವನ್ನು ಸುಡುತ್ತಿದ್ದಾರೆ, ಕಪ್ಪುಹಣವೆಲ್ಲಾ ಯಾರಿಗೂ ಉಪಯೋಗವಾಗದಂತೆ ಹೋಗುತ್ತದೆ? ಎಂದು ನಿಮಗೆ ಅನಿಸಿದರೆ ತಪ್ಪೇನಿಲ್ಲ,  ಅಸಲಿಗೆ ಕಪ್ಪುಕುಬೇರರು ಹಣವನ್ನು ಬ್ಯಾಂಕ್ ನಲ್ಲಿ ಹಾಕಬಾರದೆಂಬುದೇ ಮೋದಿ ಸರ್ಕಾರದ ಆಲೋಚನೆ, ಯಾಕಂದ್ರೆ ಡಿಸೆಂಬರ್ 30 ರೊಳಗೆ  ಬ್ಯಾಂಕ್ ಗೆ  ಹಾಕದಿದ್ದರೆ ಆ ಹಣ ಕಾಗದಕ್ಕೆ ಸಮವಾಗಿ ಹೋಗುತ್ತದೆ ಎಂಬುದು ನಮಗೂ ಗೊತ್ತು. ಅದಕ್ಕೆ ಅಕ್ರಮವಾಗಿ ಸಂಪಾದಿಸಿದ ಹಣವೆಲ್ಲಾ ಒಂದೇ ಸರಿಗೆ ನಾಶವಾಗಿ ಹೋಗುತ್ತದೆ.

modi

ಜನವರಿ 1ರಂದು ನಮ್ಮ ಸರ್ಕಾರದ ಬಳಿ ಇರುವ ಹಣಕ್ಕೂ, ಸರ್ಕಾರ ಬಳಿ ಇರುವ ಬಂಗಾರಕ್ಕೂ ವ್ಯತ್ಯಾಸ ಉಂಟಾಗುತ್ತದೆ, ಸರ್ಕಾರದ ಬಳಿ ಇರುವ ಬಂಗಾರಕ್ಕೆ ಸರಿಸಮವಾಗುವಂತಹ ಹಣ ಇರದೇ ಇರುವುದರಿಂದ, ಸರ್ಕಾರ ಮತ್ತೆ ಹೊಸ ನೋಟು ಮುದ್ರಿಸುತ್ತದೆ, ವಾರೆವ್ಹಾ  ವಾಟ್  ಎ ಐಡಿಯಾ ಮೋದಿ ಜೀ, ಒಂದೇ ಏಟಿಗೆ ಎರಡು ಹಕ್ಕಿ. ಹೊಸ ನೋಟು ಮುದ್ರಿಸುವುದರಿಂದ ಬ್ಯಾಂಕ್  ಗೆ ಹಾಕದ ದುಡ್ಡೆಲ್ಲಾ ಮತ್ತೆ ಸರ್ಕಾರದ ಬಳಿಗೆ ರಾಜಮಾರ್ಗದಲ್ಲಿ ಬರುತ್ತದೆ, ಭ್ರಷ್ಟಾಚಾರಿಗಳ ಕೆಲಸಕ್ಕೆ ಫುಲ್ ಸ್ಟಾಪ್ ಬಿದ್ದು,  ಅಷ್ಟು ಹಣವೂ ಸರ್ಕಾರದ ಬಳಿಗೆ ಬರುವುದರಿಂದ ನಮ್ಮ ಸರ್ಕಾರದ ಆರ್ಥಿಕ ಪರಿಸ್ಥಿತಿ ಒಂದೇ ಬಾರಿಗೆ ಕತ್ತಲೆಯಿಂದ ಬೆಳಕಿಗೆ ಬರುತ್ತದೆ. ಸರ್ಕಾರದ ಬಳಿ ಇರುವ ಹಣದಿಂದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಬಹುದು, ನಮ್ಮ ದೇಶದ ರೂಪುರೇಶೆ ಬದಲಾಗುತ್ತದೆ, ಈಗಲೂ ನೀವು ಕ್ಯೂನಲ್ಲಿ ನಿಂತುಕೊಂಡು ಕಷ್ಟ ಪಡುತ್ತಿದ್ದೀರಾ? ಕಷ್ಟ ಪಡಬೇಡಿ ನಾವು ಕ್ಯೂನಲ್ಲಿ ನಿಂತುಕೊಂಡು ದೇಶವನ್ನು ಅಭಿವೃದ್ಧಿಪಡಿಸೋಣ, ಈ ಕಷ್ಟಕ್ಕಿಂತ ಹೆಚ್ಚಿನ ಫಲವನ್ನು ಅನುಭವಿಸೋಣ, ಇದರಿಂದ ದೇಶವೂ ಅಭಿವೃದ್ಧಿಯಾಗುತ್ತದೆ.

-ಎಎನ್ನಾರ್

English summary :   what is modi plan behind demonetization

ಪ್ರಮುಖ ಸುದ್ದಿಗಳು ಇನ್ನಷ್ಟು

TOP STORY



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...