Oyorooms IN

Sunday, 20th August, 2017 10:48 PM

BREAKING NEWS

ಪ್ರಮುಖ ಸುದ್ದಿಗಳು

ಪೊಲೀಸರಿಗೆ ಗೊಂದಲ ಮೂಡಿಸಿದ ಅಪ್ರಾಪ್ತನ ಮೇಲೆ ಯುವತಿ ಅತ್ಯಾಚಾರ ಪ್ರಕರಣ..!!

BOY RAPED BY HE

ನವದೆಹಲಿ: ರಾಷ್ಟ್ರ ರಾಜಧಾನಿಯ ವಸಂತ್ ಕುಂಜ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವೊಂದು ಪೊಲೀಸರ ತಲೆಕೆಡೆಸುವಂತೆ ಮಾಡಿದೆ, ಅಪ್ರಾಪ್ತನೊಬ್ಬ ಯುವತಿ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾಳೆ ಎಂದು ದೂರು ನೀಡಿದ್ದಾನೆ. ಯುವತಿ ಹುಡುಗನೇ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾಳೆ.

ಅಪ್ರಾಪ್ತ ಹಾಗೂ ಯುವತಿ ಪರಸ್ಪರ ದೂರು ದಾಖಲಾಗಿರುವುದರಿಂದ, ಅತ್ಯಾಚಾರ ನಡೆಸಿದ್ದು ಯಾರು? ಅತ್ಯಾಚಾರಕ್ಕೆ ಒಳಗಾದವರು ಯಾರು? ಅನ್ನುವ ಗೊಂದಲದಲ್ಲಿದ್ದಾರಂತೆ ವಸಂತ್ ಕುಂಜ್ ಠಾಣೆಯ ಪೊಲೀಸರು.

ಪ್ರಕರಣ ಏನು?: ಫೇಸ್ಬುಕ್ ಮೂಲಕ ಪರಸ್ಪರ ಪರಿಚಯರಾಗಿದ್ದ ಅಪ್ರಾಪ್ತ ವಯಸ್ಸಿನ ಹುಡುಗ ಹಾಗೂ 26 ವರ್ಷದ ಯುವತಿ ಮಹಿಪಾಲ್ಪುರದ ಹೋಟೇಲ್ನಲ್ಲಿ ಭೇಟಿಯಾಗಿದ್ದಾರೆ,  ಹೋಟ್ನೇಲ್ಲಿ ಒಂದು ರಾತ್ರಿ ಕಳೆದ ಬಳಿಕ ಇಬ್ಬರು ಪರಸ್ಪರ ವಿರುದ್ಧ ಅತ್ಯಾಚಾರದ ಪ್ರಕರಣವನ್ನು ದಾಖಲಿಸಿದ್ದಾರೆ.

RAPE

ಯುವತಿ ನೀಡಿರುವ ದೂರಿನ ಪ್ರಕಾರ ಅಪ್ರಾಪ್ತ ವಯಸ್ಸಿನ ಹುಡುಗನೇ ಜ್ಯೂಸ್ ನಲ್ಲಿ ಮತ್ತು ಬರುವ ಮಾತ್ರೆ ಹಾಕಿ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಹೇಳಿದ್ದರೆ, ಹುಡುಗ ಹೋಟೇಲ್ ರೂಂಗೆ ಕರೆಸಿಕೊಂಡು ಮದ್ಯ ಕುಡಿಯಲು ಒತ್ತಾಯಿಸಿ, ಲೈಂಗಿಕ ಕ್ರಿಯೆಗೆ ಆಹ್ವಾನಿಸಿದ್ದಾಳೆ, ನಾನು ಒಪ್ಪದೇ ಇದ್ದಾಗ ಅತ್ಯಾಚಾರ ನಡೆಸಿದ್ದಾಗಿ ದೂರು ನೀಡಿದ್ದಾನೆ.

ಇಬ್ಬರ ದೂರನ್ನು ಸ್ವೀಕರಿಸಿರುವ ಪೊಲೀಸರಿಗೆ ಯಾರ ಮೇಲೆ ಅತ್ಯಾಚಾರವಾಗಿದೆ ಎನ್ನುವ ಗೊಂದಲ ಉಂಟಾಗಿದ್ದು,  ಯುವತಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಹಾಗೂ ಹುಡುಗನ ವಿರುದ್ಧ ಐಪಿಸಿ ಸೆಕ್ಷನ್ ಅಡಿ ದೂರು ದಾಖಲಿಸಿದ್ದಾರೆ.

 

 

English summary: Woman, teenage boy accuse each other of rape case, A 26 year old woman and 17 year old boy who be befriended each other on Facebook accused each other of rape. The were rounded up from hotel.

ಪ್ರಮುಖ ಸುದ್ದಿಗಳು ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...