Oyorooms IN

Wednesday, 25th January, 2017 6:46 AM

BREAKING NEWS

ಪ್ರಮುಖ ಸುದ್ದಿಗಳು

ಷಿಯೋಮಿ ರೆಡ್ಮಿ ಈಗ 11 ಕೋಟಿ..!!

REDMI

ಬೀಜಿಂಗ್: ಚೀನಾದ ಸ್ಮಾಟ್ ಫೋನ್ ಕಂಪನಿ ರೆಡ್ ಮಿಯ ಸ್ಮಾರ್ಟ್ ಫೋನ್ ಗಳು ಹೆಚ್ಚು ಮಾರಾಟವಾಗುತ್ತಿದ್ದು, ಪ್ರಸ್ತುತ ರೆಡ್ ಮಿ 11 ಕೋಟಿ ಫೋನ್ ಗಳನ್ನು ಮಾರಾಟ ಮಾಡಿದೆ ಎಂದು ಸಂಸ್ಥೆಯ ಉಪಾಧ್ಯಕ್ಷ ಹ್ಯೊಗ್ ಬರ್ರಾ ಟ್ಟೀಟ್ ಮಾಡಿದ್ದಾರೆ.

2013ರಲ್ಲಿ ಮೊದಲ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದ ಷಿಯೋಮಿ, ಪ್ರಪಂಚಾದ್ಯಂತ  ಇದುವರೆಗೂ 11 ಕೋಟಿ ಫೋನ್ ಗಳನ್ನು ಮಾರಾಟ ಮಾಡಿದ್ದು, ಪ್ರತಿ ಸೆಕೆಂಡ್ ಗೆ ಷಿಯೋಮಿಯ 1.21 ಯೂನಿಟ್ ಮಾರಾಟವಾಗುತ್ತಿವೆ ಎಂದು ಬರ್ರಾ ಹೇಳಿದ್ದಾರೆ.

22ರಿಂದ 29 ವರ್ಷದೊಳಗಿನವರೇ ಹೆಚ್ಚಾಗಿ ರೆಡ್ಮಿ ಫೋನ್ ಬಳಕೆ ಮಾಡುತ್ತಿದ್ದು, ಭಾರತದ ಮಾರುಕಟ್ಟೆಯಲ್ಲಿ ಷಿಯೋಮಿಯ ಅನೇಕ ಮಾದರಿಗಳು ಬಿಡುಗಡೆಗೊಂಡಿವೆ, ಇತ್ತಿಚೆಗೆ ಬಿಡುಗಡೆಗೊಂಡ ರೆಡ್ಮಿ ನೋಟ್-3 ಫೋನ್ 2 ತಿಂಗಳಲ್ಲಿಯೇ 6 ಲಕ್ಷ ಮಾರಾಟಗೊಂಡಿದೆಯಂತೆ.

ಇನ್ನು ಇದುವರೆಗೂ ಆನ್ಲೈನ್ ಮೂಲಕ ಮಾರಾಟವಾಗುತ್ತಿದ್ದ ರೆಡ್ಮಿ ಫೋನ್ ಇನ್ನು ಮುಂದೆ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ನಿರ್ಧರಿಸಲಾಗಿದ್ದು, ಇದಕ್ಕೆ ಜಸ್ಟ್ ಬೈಲೈವ್, ಇನ್ನೋಕಾಮ್ ಮೂಲಕ 5 ಸಾವಿರ ಫೋನ್ ಗಳನ್ನು ಮಾರಾಟ ಮಾಡಲು ಮುಂದಾಗಿದೆ ಎಂದು ಬರ್ರಾ ತಿಳಿಸಿದ್ದಾರೆ.

 

English summary:  xiaomi redmi phone sold over 11 millions in three years, redmi also available in open market soon.

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು