Oyorooms IN

Monday, 24th July, 2017 10:10 PM

BREAKING NEWS

ಯಾದಗಿರಿ

ನಾಲ್ಕನೆ ತರಗತಿಗೆ ನೂರಾರು ಪುಸ್ತಕ ಓದಿರುವ ಸರಕಾರಿ ಶಾಲೆಯ ವಿದ್ಯಾರ್ಥಿ

book

ಯಾದಗಿರಿ: ಸದ್ಯ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗುತ್ತಿದೆ ಎಂಬ ಕೂಗು ಕೇಳಿ ಬರುತ್ತಿದೆ. ಮಕ್ಕಳಿಂದ ಹಿರಿಯರತನಕ ಪುಸ್ತಕ ಓದುವವರು ಇಲ್ಲಾ ಎಲ್ಲರೂ ಮೂಬೈಲ್ ಎಂಬ ಮಾಯಾಲೋಕದೊಳಗೆ ಇಂಟರ್ ನೆಟ್ ಜಗತ್ತಿನ ಸುಳಿಯಲ್ಲಿ ಸಿಕ್ಕಿ ಪುಸ್ತಕಗಳು ಮೂಲೆ ಸೇರುತ್ತಿವೆ ಎನ್ನುತ್ತಿದ್ದಾರೆ. ಇದಕ್ಕೆ ವಿರುದ್ಧವಾಗಿದೆ ಯಾದಗಿರಿ ಜಿಲ್ಲೆಯ ಗುರಮಿಠಕಲ್ ಸಮೀಪದ ಸರ್ಕಾರಿ ಶಾಲೆ ಎಂ.ಟಿ.ಪಲ್ಲಿಯಲ್ಲಿನ ನಾಲ್ಕನೆ ತರಗತಿ ಓದುತ್ತಿರುವ ವಿದ್ಯಾರ್ಥಿಯ ಹವ್ಯಾಸ.

ಹೆಸರು ಮುಕುಂದಾ ತಂದೆ ಬುಗ್ಗಪ್ಪ ವ್ಯವಸಾಯ ಮಾಡುತ್ತಾರೆ. ಈ ಶಾಲೆಯಲ್ಲಿ ಸುಮ್ಮನೆ ತಮ್ಮ ಪಠ್ಯ ಓದಿಕೊಂಡು ಸುಮ್ಮನಾಗುವ ಹಲವು ಮಕ್ಕಳ ನಡುವೆ ಈ ಮುಕುಂದ ಶಾಲೆಯ ಗ್ರಂಥಾಲಯದ ಪುಸ್ತಕದೊಳಗಿನ ಓದುವ ಹುಳುವಾಗಿದ್ದಾನೆ ಎಂದರೆ ತಪ್ಪಾಗದು. ನಾವು ಮಕ್ಕಳು ಏನೇನೊ ಸಾಧನೆ ಮಾಡಿರುವುದನ್ನು ಇತ್ತಿಚೆಗೆ ಕೇಳಿದ್ದೇವೆ ಆದರೆ ಈ ಮುಕುಂದ ತಮ್ಮ ಶಾಲೆಯ ಗ್ರಂಥಾಲಯದ ಒಟ್ಟು 110 ಕ್ಕೂ ಹೆಚ್ಚು ಪುಸ್ತಕಗಳ ಹೆಸರು ಬಿಡುವಿಲ್ಲದೆ ಹೇಳಬಲ್ಲ ಜಾಣನಾಗಿದ್ದಾನೆ.

ಈ ಮಗುವಿನ ಆಸಕ್ತಿ ನೋಡಿ ತುಂಬಾ ಸಂತೋಷವಾಯಿತು. ಪುಸ್ತಕ ಓದುವ ಹವ್ಯಾಸ ಇಷ್ಟು ಚಿಕ್ಕ ವಯಸ್ಸಿನಲ್ಲಿ ಬೆಳೆಸಿಕೊಂಡಿರುವುದು ಗಮನಿಸಬೇಕಾದ ಸಂಗತಿ. ಇವನು ಇಲ್ಲಿಯವರೆಗೆ ಸುಮಾರು ೧೧೦ಕ್ಕೂ ಹೆಚ್ಚು ಪುಸ್ತಕಗಳ ಬಗ್ಗೆ ಹೇಳುವ ಸಾಮರ್ಥ್ಯ ಕಂಡು ನಿಜಕ್ಕೂ ನಾನು ಬೆರಗಾಗಿರುವೆ. ಇಂತಹ ಮಕ್ಕಳಿಗೆ ಮನೆಯವರು, ಶಾಲೆಯ ಸಿಬ್ಬಂಧಿಗಳು ಬೆನ್ನೆಲುಬಾಗಿ ನಿಂತರೆ ಒಳ್ಳೆಯ ಓದುಗರಾಗಲು ಸಹಕಾರವಾಗುತ್ತದೆ.

-ಕೆ.ಎಂ.ವಿಶ್ವನಾಥಮರತೂರ, ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿಗಳು ಯಾದಗಿರಿ

ಅವನು ಒಂದೇ ಉಸಿರಿನಲ್ಲಿ ಇಷ್ಟು ಪುಸ್ತಕಗಳ ಹೆಸರನ್ನು ಹೇಳುತ್ತಾನೆ. ಮುಂದೆ ಒಂದೊಂದೆ ಪುಸ್ತಕದೊಳಗಿನ ಕಥೆಯನ್ನು ಮಾಹಿತಿಯನ್ನು ಕೇಳುತ್ತಾ ಹೋದರೆ ಆಯಾಸವಿಲ್ಲದೆ ಅತ್ಯಂತ ಪಕ್ವತೆಯಿಂದ ಅರಳು ಹುರಿದಂತೆ ಹೇಳುತ್ತಾನೆ. ಅವನು ಹೇಳುವುದನ್ನು ಗಮನಿಸಿದರೆ ಈ ದೇವರ ಮಂದಿರದಲ್ಲಿ ಮಂತ್ರ ಹೇಳುವಷ್ಟೆ ವೇಗವಾಗಿ ಹೇಳುತ್ತಾನೆ. ಇವನು ಬರಿ ಬಾಯಿಪಾಠ ಮಾಡಿದ್ದಾನೆ ಎಂದು ಪರೀಕ್ಷಿಸಿದರೆ ಪ್ರತಿಯೊಂದು ಪುಸ್ತಕ ವಿಷಯವನ್ನು ಅಚ್ಚುಕಟ್ಟಾಗಿ ತಪ್ಪಿಲ್ಲದೆ ಹೇಳುವ ಈ ಮಗುವಿನ ಸಾಧನೆ ನಿಜಕ್ಕೂ ಮೆಚ್ಚುವಂತಹದ್ದು.

ಇಷ್ಟು ಅಲ್ಲದೆ ಮುಕುಂದ ತನ್ನ ತರಗತಿಯಲ್ಲಿ ಜಾಣ ವಿದ್ಯಾರ್ಥಿಯಾಗಿದ್ದಾನೆ. ಪಠ್ಯ ಮತ್ತು ಪಠ್ಯೇತರ ಎರಡರಲ್ಲಿಯೂ ಮುಂದೆಯಿದ್ದಾನೆ. ತನ್ನ ಹೆಚ್ಚಿನ ಬಿಡುವಿನ ಸಮಯವನ್ನು ಗ್ರಂಥಾಲಯದಲ್ಲಿ ಕಳೆಯುತ್ತಾನೆ. ಪ್ರತಿದಿನ ತಪ್ಪದೇ ಒಂದು ಹೊಸ ಪುಸ್ತಕ ಓದುತ್ತಾನೆ. ತನ್ನ ಗೆಳೆಯರಿಗೂ ಪುಸ್ತಕ ಓದಲು ಪ್ರೋತ್ಸಾಹಿಸುತ್ತಾನೆ.

mukunda

ತರಗತಿಯಲ್ಲಿ ಕಥೆ ಹೇಳುವುದು, ಪುಸ್ತಕ ಪರಿಚಯ ಮಾಡುವುದು, ಪುಸ್ತಕ ಹುಡುಕುವುದು, ಕಥೆಯನ್ನು ಜೋರಾಗಿ ಓದುವುದು, ಚಿತ್ರ ಬಿಡಿಸುವುದು, ವಿಶೇಷ ವಸ್ತುಗಳ ಸಂಗ್ರಹ ಮಾಡುವುದು, ಗಿಡ ಬೆಳೆಸುವುದು, ಕೈತೋಟ ಮಾಡುವುದು ಇತ್ಯಾದಿ ಹವ್ಯಾಸಗಳನ್ನು ನಾಲ್ಕನೆ ತರಗತಿಯಲ್ಲಿಯೆ ಇಟ್ಟುಕೊಂಡಿರುವ ಈ ಮುಕುಂದ ಇಡಿ ಊರಿಗೆ ಎಲ್ಲಾ ಮಕ್ಕಳಲ್ಲಿ ಎದ್ದು ಕಾಣುವ ವ್ಯಕ್ತಿತ್ವ ಹೊಂದಿರುವ ಮಗು ಎಂದರೆ ತಪ್ಪಾಗುವುದಿಲ್ಲ.

ಏನೆ ಇರಲಿ ಇಷ್ಟು ಚಿಕ್ಕ ವಯಸ್ಸಿನಲ್ಲಿ ಓದುವ ಗೀಳು ಹಚ್ಚಿಕೊಂಡಿರುವ ಮುಕುಂದ ಮುಂದೆ ಒಳ್ಳೆಯ ಓದುಗನಾಗಿ ಉಜ್ವಲ ಭವಿಷ್ಯ ನಿರ್ಮಾಣವಾಗಲಿ ಈ ಮಗುವಿನ ಓದುವ ರೀತಿ ಉಳಿದ ಗ್ರಾಮೀಣ ಮಕ್ಕಳಿಗೆ ಪಾಠವಾಗಲಿ ಎಂಬುವುದಷ್ಟೆ ನಮ್ಮ ಹಾರೈಕೆ.

 

ನಮ್ಮ ಶಾಲೆಯಲ್ಲಿನ ಸುಸಜ್ಜಿತ ಗ್ರಂಥಾಲಯವೆ ಈ ಹವ್ಯಾಸಕ್ಕೆ ಮುಖ್ಯ ಕಾರಣವಾಗಿದೆ. ಮುಕುಂದ ಪ್ರತಿನಿತ್ಯ ಗ್ರಂಥಾಲಯ ಬಳಕೆ ಮಾಡುತ್ತಾನೆ. ಪುಸ್ತಕ ಓದುತ್ತಾನೆ. ನಾವು ಮುಕ್ತ ಗ್ರಂಥಾಲಯ ಮಾಡಿದ್ದು ಮಕ್ಕಳು ಯಾವಾಗ ಬೇಕೊ ಅವಾಗ ಪುಸ್ತಕ ಪಡೆಯುವ ಹಾಗೆ ಮಾಡಿದ್ದೇವೆ. ಹಲವು ಮಕ್ಕಳು ಇಲ್ಲಿ ಹಲವು ರೀತಿಯ ಇಷ್ಟವಾದ ಪುಸ್ತಕಗಳನ್ನು ಓದುತ್ತಾರೆ. ಎಲ್ಲ ಮಕ್ಕಳಲ್ಲಿ ಮುಕುಂದ ಹೆಚ್ಚಿಗೆ ಓದುತ್ತಾನೆಯಂಬುವುದು ಅವನು ಹೇಳುವ ರೀತಿಯಲ್ಲಿಯೆ ಅರ್ಥವಾಗುತ್ತದೆ.

ಶ್ರೀ ಭೀಮರಾಯ,ಮುಖ್ಯ ಗುರುಗಳು ಸ.ಹಿ.ಪ್ರಾ.ಶಾಲೆ ಎಂ.ಟಿ.ಪಲ್ಲಿ

English summary:  yadagiri govt school boy read all books in library

ಯಾದಗಿರಿ ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...