Oyorooms IN

Tuesday, 28th March, 2017 7:28 PM

BREAKING NEWS

ಕಲಬುರಗಿ

ಲವರ್ ಜೊತೆ ಓಡಿಹೋಗಲು ಹೈಡ್ರಾಮಾ ಕ್ರಿಯೇಟ್ ಮಾಡಿದ ಯುವತಿ

ಕಲಬುರಗಿ: ಪ್ರಿಯಕರನೊಂದಿಗೆ ಓಡಿಹೋಗಲು ಗೆಳತಿಯ ಮೂಲಕ ಮೊಸಳೆಗೆ ಬಲಿಯಾಗಿರುವುದಾಗಿ ಊರಲ್ಲೆಲ್ಲಾ ಸುಳ್ಳು ಸುದ್ದಿ ಹಬ್ಬಿಸಿ ಸಖತ್ ಪ್ಲ್ಯಾನ್ ಮಾಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಜೇವರ್ಗಿ ತಾಲೂಕಿನ ಭೋಸ್ಗಾ (ಬಿ) ಗ್ರಾಮದ 18 ವರ್ಷದ ಅಶ್ವಿನಿ ಭೀಮಾನದಿಯಲ್ಲಿ ಬಟ್ಟೆ ತೊಳೆಯಲೆಂದು ಗೆಳತಿಯ ಜೊತೆ ಹೋಗಿದ್ದಳು. ಅಲ್ಲಿಂದಲೇ ತನ್ನ ಪ್ರಿಯಕರನ ಜೊತೆ ಓಡಿ ಹೋಗಲು ಆಕೆ ಸಖತ್ತಾಗಿ ಪ್ಲ್ಯಾನ್ ಮಾಡಿದ್ದಳು.

ಓಡಿ ಹೋಗುವ ಮುನ್ನ ತನ್ನ ಗೆಳತಿಗೆ ಮೊಸಳೆ ಎಳೆದೊಯ್ದಿರುವುದಾಗಿ ಹೇಳು ಎಂದು ಹೇಳಿದ್ದಾಳೆ, ಆಕೆ ಹೇಳಿದಂತೆ ಗೆಳತಿ ಚನ್ನಮ್ಮ  ಗ್ರಾಮದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದಾಳೆ. ಭೀಮಾ ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿ ಮೊಸಳೆಗೆ ಬಲಿಯಾಗಿದ್ದಾಳೆಂಬ ಸುಳ್ಳು ವದಂತಿ ಹಬ್ಬಿದೆ.

ಮೊಸಳೆ ಯುವತಿಯನ್ನು ನಿಜವಾಗಿಯೂ ಎಳೆದೊಯ್ದಿದೆ ಎಂದು ಸ್ಥಳೀಯರು ಮೀನುಗಾರರು ಹಾಗೂ ಅರಣ್ಯ ಇಲಾಖೆಯಿಂದ ಶೋಧ ಕಾರ್ಯ ಆರಂಭಿಸಿದ್ದಾರೆ, ಪೊಲೀಸರು, ಅಗ್ನಿಶಾಮಕ ದಳದವರು, ಈಜು ತಜ್ಞರು ಬರೋಬ್ಬರಿ 6 ಗಂಟೆ ಹುಡುಕಾಡಿದರೂ ಯುವತಿಯನ್ನು ಮೊಸಳೆ ತಿಂದಿದೆ ಎನ್ನುವುದಕ್ಕೆ ಯಾವುದೇ ಪುರಾವೆ ಸಿಗದೇ ಇದ್ದಾಗ ಪೊಲೀಸರು ಸುದ್ದಿಯನ್ನು ಹಬ್ಬಿಸಿದ ಚೆನ್ನಮ್ಮಳನ್ನು ವಿಚಾರಿಸಿದಾಗ ಅಸಲಿ ವಿಷ್ಯ ಬೆಳಕಿಗೆ ಬಂದಿದೆ.

ಪರಾರಿಯಾಗಿರುವ ಅಶ್ವಿನಿಯ ಮದುವೆಯನ್ನು ಬೇರೊಬ್ಬನ ಜೊತೆ ನಡೆಸಲು ಮನೆಯವರು ನಿಶ್ಚಯಮಾಡಿಕೊಂಡಿದ್ದು, ಆತನನ್ನು ಮದುವೆಯಾಗಲು ಇಷ್ಟವಿಲ್ಲದ ಅಶ್ವಿನಿ ಪ್ರಿಯಕರನನ್ನು ಮದುವೆಯಾಗಲು ಮೊಸಳೆ ನಾಟಕವನ್ನಾಡಿದ್ದಾಳೆ ಎಂದು ತಿಳಿದು ಬಂದಿದ್ದು, ಇತ್ತ ಪೊಲೀಸರು ಅಶ್ವಿನಿ ಶವಕ್ಕಾಗಿ ಹುಡುಕಾಡುತ್ತಿದ್ದರೆ, ಅತ್ತ ಅಶ್ವಿನಿ ತನ್ನ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ.

ಕಲಬುರಗಿ ಇನ್ನಷ್ಟು

ಪ್ರಮುಖ ಸುದ್ದಿಗಳು


ಗುಂಡಿನ ಚಕಮಕಿ: ನಾಲ್ವರ ಸಾವು

ಶ್ರೀನಗರ:  ಕಣಿವೆ ರಾಜ್ಯ ಕಾಶ್ಮೀರದಲ್ಲಿ...