Oyorooms IN

Thursday, 27th July, 2017 4:12 AM

BREAKING NEWS

ಪ್ರಮುಖ ಸುದ್ದಿಗಳು

ನಟಿ ರಮ್ಯಾ ವಿರುದ್ಧ ಯುವಕನ ಧರಣಿ, ರಮ್ಯಾ ಮೋಸ ಮಾಡಿದರಂತೆ.!!??

protest-against-ramya

ಮಂಡ್ಯ: ಮಾಜಿ ಸಂಸದೆ, ಚಿತ್ರ ನಟಿ ರಮ್ಯಾ ಅವರು ಸಂಸದರಾಗಿದ್ದಾಗ ಒನ್ ಐಡಿಯಾ ಒನ್ ಎಂಪಿ ಎನ್ನುವ ಯೋಜನೆಯಲ್ಲಿ ಕೆಲಸ ಮಾಡಿದ್ದ ಯುವಕನೊಬ್ಬ ಈಗ  ಆ ಯೋಜನೆ ಸಂಬಂಧಿಸಿದಂತೆ ನನಗೆ ಯಾವ ಹಣವೂ ಬಂದಿಲ್ಲ ಎಂದು ರಮ್ಯಾ ಅವರನ್ನು ಕೇಳಲು ಹೋದಾಗ, ಆ ಯುವಕನನ್ನು ರಮ್ಯಾ ದಬಾಯಿಸಿ ಮನೆಯಿಂದ ಆಚೆ ಕಳುಹಿಸಿದ್ದಾರಂತೆ.

ರಮ್ಯಾ ನಡೆಯಿಂದ ಆಕ್ರೋಶಗೊಂಡ ಯುವಕ ರಮ್ಯಾ ಮನೆ ಎದುರೇ ಧರಣಿ ಕುಳಿತುಕೊಂಡಿದ್ದು, ರಮ್ಯಾ ಅವರು ಸಂಸದರಾಗಿ ಒನ್ ಐಡಿಯಾ ಒನ್ ಎಂಪಿ ಯೋಜನೆಯಡಿ ಮಾಡಿದ ಪ್ರಾಜೆಕ್ಟ್ ಆಯ್ಕೆಯಾದರೆ ನಗದು ಬಹುಮಾನ ನೀಡುವುದಾಗಿ ಹೇಳಿದ್ರು, ಈ ಯೋಜನೆಯಡಿಯಲ್ಲಿ ನನಗೆ ಅಲ್ಲ ಬೇರೆ ಯಾರಿಗೂ ಬಹುಮಾನ ನೀಡದೇ ಎಂದು ಗಲಾಟೆ ಮಾಡಿದ್ದಾನೆ.

ಈ ಬಗ್ಗೆ ರಮ್ಯಾ ಅವರನ್ನು ಕೇಳಿದರೆ ನಾನು ಈಗ ಮಾಜಿ ಸಂಸದೆ ನನಗೂ ಅದಕ್ಕೂ ಸಂಬಂಧವಿಲ್ಲ, ನೀವು ಜಿಲ್ಲಾಧಿಕಾರಿ, ಹಾಲಿ ಸಂಸದರನ್ನು ಕೇಳಿ ಎನ್ನುತ್ತಿದ್ದಾರಂತೆ, ಈ ಘಟನೆಯಿಂದ ರಮ್ಯಾ ಹಾಗೂ ಯುವಕನ ಬೆಂಬಲಿಗರು ಮಾತಿನ ಚಕಮಕಿ  ನಡೆಸಿ, ತಳ್ಳಾಟ, ನೂಕಾಟವನ್ನು ಮಾಡಿ ಗೊಂದಲದ ವಾತಾವರಣವನ್ನು ಸೃಷ್ಟಿಸಿದ್ದಾರೆ.

ಪೊಲೀಸರು ಮಧ್ಯಪ್ರವೇಶಿಸಿ ಯುವಕನನ್ನು ವಶಕ್ಕೆ ಪಡೆದ ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ರಮ್ಯಾ ನಮ್ಮ ಕೆಲಸ ನಾವು ಮಾಡಿದ್ದೇವೆ, ಆ ಪ್ರಾಜೆಕ್ಟ್ ಬಗ್ಗೆ ಜಿಲ್ಲಾಧಿಕಾರಿಗಳು ತೀರ್ಮಾನ ಮಾಡ್ಬೇಕು ಎಂದು ಹೇಳಿದ್ದಾರೆ.

English summary :  youth protest against ramya in mandya

ಪ್ರಮುಖ ಸುದ್ದಿಗಳು ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...