Oyorooms IN

Tuesday, 21st February, 2017 5:31 PM

BREAKING NEWS

ಪ್ರಮುಖ ಸುದ್ದಿಗಳು

ಸಾಕು ನಾಯಿ ಸಾವನ್ನಪ್ಪಿದ್ದಕ್ಕೆ ಮಾಲೀಕ ಆತ್ಮಹತ್ಯೆ

ಪುಣೆ: ವಿಶ್ವಾಸದಲ್ಲಿ ನಾಯಿಗಿಂತ ಬೇರೆ ಯಾವ ಪ್ರಾಣಿಯೂ ಇಲ್ಲ ಅಂತಾರೆ, ಮಾಲೀಕ ಹೋಗುತ್ತಿದ್ದರೆ, ಗೇಟು ವರೆಗೆ ಬರುತ್ತದೆ, ಅನುಕ್ಷಣ ಕಣ್ಣಿನ ರಪ್ಪೆಯಂತೆ ಯಜಮಾನನ ಕುಟುಂಬವನ್ನು ಕಾಪಾಡುತ್ತದೆ. ಅಷ್ಟೊಂದು ಪ್ರೀತಿ, ವಿಶ್ವಾಸ ಸೃಷ್ಟಿಯಲ್ಲಿ ಬೇರೆ ಯಾವ ಪ್ರಾಣಿಯು ತನ್ನ ಯಜಮಾನನ ಮೇಲೆ ತೋರುವುದಿಲ್ಲ ಎಂದರೆ ಅತಿಯೋಶಕ್ತಿ ಅಲ್ಲ.

ಇಂತಹ ನಾಯಿಯನ್ನು ಪ್ರಾಣಿಗಿಂತ ಪ್ರಾಣ ಎನ್ನುವಂತೆ ನೋಡಿಕೊಳ್ಳುವವರು ಇದ್ದಾರೆ, ಪ್ರಾಣಕ್ಕಿಂತ ಹೆಚ್ಚಾಗಿ ಸಾಕುತ್ತಿದ್ದ ನಾಯಿ ಸಾವನ್ನಪ್ಪಿದ್ದರಿಂದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ, ಕೇಳುವುದಕ್ಕೆ ಆಶ್ಚರ್ಯವಾಗಿದ್ದರು, ಸೋಮವಾರ ರಾತ್ರಿ ಹರ್ಷವರ್ಧನ್ ರಾಘವ್ ಫ್ಲಾಟ್ ನ 6ನೇ ಅಂತಸ್ತಿನಿಂದ ದೂಕಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಛತ್ತಿಸ್ ಗಡ ಮೂಲದ ರಾಘವ್ ಪುಣೆಯ ಸಿಂಬಯೊಸಿಸ್ ಕಾಲೇಜಿನ ಮ್ಯಾನೇಜ್ ಮೆಂಟ್ ವ್ಯಾಸಂಗ ಮಾಡುತ್ತಿದ್ದು, ಫ್ಲ್ಯಾಟ್ ನಲ್ಲಿ ಪ್ರೀತಿಯಿಂದ ಸಾಕುತ್ತಿದ್ದ ನಾಯಿ 8ತಿಂಗಳ ಹಿಂದೆ ಸಾವನ್ನಪ್ಪಿದ್ದು, ಆ ನೋವನ್ನು ತಡೆದುಕೊಳ್ಳಲು ಆಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಸೂಸೈಡ್ ನೋಟ್ ನಲ್ಲಿ ಹೇಳಿದ್ದಾನೆ, ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಕ್ಕೆ ತಂದೆ-ತಾಯಿ ನನ್ನನ್ನು ಕ್ಷಮಿಸಿ, ನನ್ನ ಸಾವಿಗೆ ಯಾರು ಕಾರಣವಲ್ಲ ಎಂದು ಸೂಸೈಡ್ ನೋಟ್ ನಲ್ಲಿ ಬರೆದಿದ್ದಾನೆ.

English summary: youth suicide after  his pet dog dies

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು

ಕಾಂಗ್ರೆಸ್, ಬಿಜೆಪಿ ಕಪ್ಪ ಕಾಣಿಕೆ ನೀಡುವುದು ಹೊಸದೇನಲ್ಲ

ತುಮಕೂರು: ಕಾಂಗ್ರೆಸ್,ಬಿಜಿಪಿ ಪಕ್ಷಗಳು ಹೈಕಮಾಂಡ್‌ಗೆ ಕಪ್ಪಾ...


ಅಶ್ಲೀಲ ಚಿತ್ರ ನೋಡುವ ಗಂಡನನ್ನು ಕಾಪಾಡಿ

ಮುಂಬೈ:  ಮಧ್ಯರಾತ್ರಿಯಲ್ಲೂ ಎದ್ದು ಕೂತು...


ಬಿಜೆಪಿಗೆ ತಾಕತ್ ಇಲ್ಲ: ಡಾ.ಜಿ.ಪರಮೇಶ್ವರ್

ಕಲಬುರಗಿ :  ಮುಂಬರುವ ಚುನಾವಣೆಯನ್ನು...