Oyorooms IN

Thursday, 27th July, 2017 4:12 AM

BREAKING NEWS

ಪ್ರಮುಖ ಸುದ್ದಿಗಳು

ಪೊಲೀಸ್ರಾಯ್ತು ಈಗ ಜನರ ಮೇಲೆಯೂ ಮಹದೇವಪ್ಪ ಪುತ್ರನ ದರ್ಪ.!!

ಮೈಸೂರು: ಮೈಸೂರು ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್ ದರ್ಪ ದಿನೇದಿನೇ ಹೆಚ್ಚಾಗುತ್ತಿದ್ದು, ಮರಳು ಸಾಗಾಣಿಕೆಗೆ ಅವಕಾಶ ನೀಡದಕ್ಕೆ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಸುನೀಲ್ ಬೋಸ್ ಈಗ ಜನರ ಮೇಲೆಯೂ ತನ್ನ ದರ್ಪವನ್ನು ಪ್ರದರ್ಶಿಸಿದ್ದಾರೆ.

ಮಹದೇವಪ್ಪ ಪ್ರತಿನಿಧಿಸುವ ತಿ.ನರಸೀಪುರ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲು ಬಂದಿದ್ದ, ಸುನೀಲ್ ಬೋಸ್ ಅವರನ್ನು ಕುಕ್ಕೂರು ಗ್ರಾಮದ ಕೆಲ ಯುವಕರು ಪ್ರಶ್ನಿಸಿದ್ದು, ಊರಿನ ಸಮಸ್ಯೆಗಳ ಬಗ್ಗೆ ಸಚಿವರಿಗೆ ತಿಳಿಸಬೇಕಿತ್ತು, ಅವರು ಬರುತ್ತಾರೆ ಎಂದುಕೊಂಡರೆ ನೀವು ಬಂದಿದ್ದೀರಿ, ಹೋಗಿ ನಿಮ್ಮ ತಂದೆಯನ್ನು ಕಳುಹಿಸಿ, ನೀವು ಯಾಕೆ ಕಾಮಗಾರಿಗೆ ಚಾಲನೆ ನೀಡಬೇಕು ಎಂದೆಲ್ಲಾ ಪ್ರಶ್ನೆ ಮಾಡಿದ್ದಾರೆ.

ಯುವಕರ ಪ್ರಶ್ನೆಗಳಿಂದ ತಬ್ಬಿಬ್ಬಾದ ಸಚಿವ ಮಹದೇವಪ್ಪ ಪುತ್ರ ಸುನೀಲ್ ಬೋಸ್, ಯುವಕರನ್ನು ಕಸ್ಟಡಿಗೆ ತೆಗೆದುಕೊಳ್ಳುವಂತೆ ಪೊಲೀಸರಿಗೆ ಹೇಳಿ, ಅಲ್ಲಿಂದ ತೆರಳಿದ್ದಾರೆ, ಸಚಿವರ ಪುತ್ರನ ಮಾತನ್ನೇ, ಗೃಹ ಸಚಿವರ ಆದೇಶ ಎಂಬಂತೆ ತಲಕಾಡು ಪೊಲೀಸರು ಪಾಲಿಸಿದ್ದು, ಯುವಕರನ್ನು ಕಸ್ಟಡಿಗೆ ತೆಗೆದುಕೊಂಡು ರಾತ್ರಿಯಿಡೀ ಠಾಣೆಯಲ್ಲಿ ಇರಿಸಿಕೊಂಡು ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ.

ಯುವಕರನ್ನು ಯಾವ ಕಾಯ್ದೆಯಡಿ, ಯಾವ ಅಪರಾಧಕ್ಕಾಗಿ ಕಸ್ಟಡಿಗೆ ತೆಗೆದುಕೊಳ್ಳಲಾಯಿತು ಎನ್ನುವುದು ಗೊತ್ತಿಲ್ಲದ್ದೇ ಕಂಗಾಲಾಗಿದ್ದವರನ್ನು, ತಹಶೀಲ್ದಾರ್ ಮುಂದೆ ಹಾಜರುಪಡಿಸಿದ್ದಾರೆ. ತಿ.ನರಸೀಪುರದಲ್ಲಿ ಸಚಿವ ಎಚ್.ಸಿ.ಮಹದೇವಪ್ಪ ಹಾಗೂ ಆತನ ಪುತ್ರ ಸುನೀಲ್ ಬೋಸ್ ದಬ್ಬಾಳಿಕೆ ಈಗ ಜನರ ಮೇಲೆಯೂ ನಡೆಯುತ್ತಿರುವುದು ಕ್ಷೇತ್ರದ ಜನರ ದುರಾದೃಷ್ಟವೇ ಸರಿ.

English summary: youths arrested for questioning minister son

 

 

ಪ್ರಮುಖ ಸುದ್ದಿಗಳು ಇನ್ನಷ್ಟು

TOP STORY



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...